ಈಜಾಡಲು ಹೋಗಿ ಕೃಷಿ ಹೊಂಡದಲ್ಲಿ ಮುಳುಗಿದ ಬಾಲಕನ ರಕ್ಷಣೆಗೆ ಹೋದ ವ್ಯಕ್ತಿ ಮತ್ತು ಬಾಲಕ ಸಾವು.


ಚಿಕ್ಕಬಳ್ಳಾಪುರ:ಕೃಷಿ ಹೊಂಡದಲ್ಲಿ ಈಜಲು ಹೋದ ಬಾಲಕನೋರ್ವ ನೀರಿನಲ್ಲಿ ಮುಳುಗುತ್ತಿದ್ದ ಆತನನ್ನು ರಕ್ಷಣೆ ಮಾಡಲು ಹೋದ ವ್ಯಕ್ತಿ ಮತ್ತು ಬಾಲಕ ಇಬ್ಬರು ಸಾವನ್ನಪ್ಪಿರುವ ಘಟನೆ ಚೇಳೂರು ತಾಲ್ಲೂಕಿನ ಗುಂಡ್ಲಪಲ್ಲಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸುಮಾರು ೧ ಗಂಟೆ ಸಮಯದಲ್ಲಿ ನಡೆದಿದೆ.
ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದವರನ್ನು ಚೇಳೂರು ತಾಲ್ಲೂಕಿನ ಬೀರಂಗಿವಾಂಡ್ಲಪಲ್ಲಿ ಗ್ರಾಮದ ೪೦ ವರ್ಷದ ಭಾಸ್ಕರ್ ಮತ್ತು ತಾಯಿಯ ತವರೂರು ಆದ ಬೀರಂಗಿವಾಂಡ್ಲಪಲ್ಲಿ ಗ್ರಾಮಕ್ಕೆ ಬಂದಿದ್ದ ಸೋಮನಾಥಪುರ ಗ್ರಾಮದ ನಿವಾಸಿ ಹಾಲಿ ಬೆಂಗಳೂರು ನಗರದಲ್ಲಿ ವಾಸವಾಗಿರುವ ೧೪ ವರ್ಷದ ಮಹೇಂದ್ರ ಬಿನ್ ಎಸ್.ಎಂ.ವೆಂಕಟರೆಡ್ಡಿ ಎಂದು ಗುರುತಿಸಲಾಗಿದೆ.
ಗುರುವಾರ ಬೀರಂಗಿವಾಂಡ್ಲ ಗ್ರಾಮದ ೬-೭ ಮಂದಿ ಮಕ್ಕಳು ನಲ್ಲಗುಟ್ಟಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡ್ಲಪಲ್ಲಿ ಗ್ರಾಮದ ಸರಕಾರಿ ಶಾಲೆಯ ಹಿಂಭಾಗದಲ್ಲಿರುವ ನರಸಿಂಹರೆಡ್ಡಿ ಎಂಬವರಿಗೆ ಸೇರಿದ ಕೃಷಿ ಹೊಂಡಕ್ಕೆ ಈಜಾಡಲು ಬಂದಿದ್ದಾರೆ.
ಬೇಸಿಗೆ ರಜೆಗಾಗಿ ಅಜ್ಜನಾದ ಬೂದಿಲಪಲ್ಲಿ ವೆಂಕಟರಾಮಪ್ಪ ಮೊಮ್ಮಗನಾಗಿದ್ದು ಅಜ್ಜನವರ ಊರಿಗೆ ಬಂದಿದ್ದ ೧೪ ವರ್ಷದ ಮಹೇಂದ್ರ ಸಹ ಅವರ ಜೊತೆ ಈಜಾಡಲು ಹೋಗಿ ಕೃಷಿ ಹೊಂಡದಲ್ಲಿ ಇಳಿದಿದ್ದಾನೆ, ಈಜು ಬಾರದ ಮಹೇಂದ್ರ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದನ್ನು ಕಂಡ ಇತರೆ ಯುವಕರು ಕೂಗಿಕೊಂಡಾಗ ಕೃಷಿ ಹೂಂಡಾದ ಮೇಲೆ ನಿಂತಿದ್ದ ಬೀರಂಗಿವಾಂಡ್ಲಪಲ್ಲಿ ಗ್ರಾಮದ ಭಾಸ್ಕರ್ ಬಾಲಕನ ರಕ್ಷಣೆಗಾಗಿ ಕೃಷಿ ಹೊಂಡಕ್ಕೆ ಇಳಿದಿದ್ದಾನೆ.
ಈಜು ಬಾರದ ಬಾಲಕ ಮಹೇಂದ್ರ ರಕ್ಷಣೆ ಮಾಡಲು ಬಂದ ಭಾಸ್ಕರ್ ರವರನ್ನು ಬಿಗಿಯಾಗಿ ಅಪ್ಪಿ ಕೊಂಡ ಪರಿಣಾಮ ಇಬ್ಬರು ನೀರಿನಿಂದ ಹೊರಕ್ಕೆ ಬರಲಿಕ್ಕೆ ಆಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ, ಇದನ್ನು ಕಣ್ಣಾರೆ ಕಂಡ ಇತರೆ ಮಕ್ಕಳು ಭಯಪಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ಮಧ್ಯಾಹ್ನ ಸುಮಾರು ೨ ಗಂಟೆಯ ಸಮಯದಲ್ಲಿ ಕೃಷಿ ಹೊಂಡದ ಕಡೆ ಬಂದ ಗ್ರಾಮದ ಮಹಿಳೆಯೊಬ್ಬರು, ಕೃಷಿ ಹೊಂಡದ ಬಳಿ ಎರಡು ಜೊತೆ ಬಟ್ಟೆ ಮತ್ತು ಚಪ್ಪಲಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದಾಗ ಅವಘಡ ಬಹಿರಂಗಗೊಂಡಿದೆ.
ಇನ್ನು ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚೇಳೂರು ಪೊಲೀಸರು ಆಗಮಿಸಿ, ಶವವನ್ನು ಹೊರಕ್ಕೆ ತರಲು ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ ನಂತರ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಶವಗಳನ್ನು ಕೃಷಿಹೊಂಡದಿಂದ ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ,
ಇನ್ನು ಇಬ್ಬರ ಮೃತ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಸ್ಥಳಕ್ಕೆ ಅಗಮಿಸಿದ್ದರು, ಇನ್ನು ಮೃತ ಪೋಷಕರು, ಸಂಬಂಧಿಕರು ಅಕ್ರಂಧನ ಮುಗಿಲು ಮುಟ್ಟಿತ್ತು.

ದೇಶ