ಹಿರಿಯ ಶ್ರೇಣಿ ನ್ಯಾಯಾಧಿಶೆ ಲಾವಣ್ಯ ಅವರಿಗೆ ಸಂಪ್ರದಾಯಕ ಬೀಳ್ಕೊಡುಗೆ


ಬಾಗೇಪಲ್ಲಿ:ಸುಮಾರು ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿರುವುದು ಮನಸಿಗೆ ತೃಪ್ತಿ ತಂದಿದೆ ಈ ಭಾಗದ ಹೆಣ್ಣುಮಗುವಂತೆ ನನಗೆ ಗೌರವ ನೀಡಿದ್ದಕ್ಕೆ ಎಲ್ಲಾರಿಗೂ ಹೃತ್ಪೂರ್ವಕ ಧವಾದಗಳು ಎಂದು ಹಿರಿಯ ಶ್ರೇಣಿ ನ್ಯಾಯಾಧಿಶೆ ಲಾವಣ್ಯ ತಿಳಿಸಿದ್ದಾರೆ. ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ಅಯೋಜೋಸಲಾಗಿದ್ದ ನ್ಯಾಯಾಧೀಶರ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸರ್ಕಾರಿ ಸೇವೆಗೆ ಸೇರಿದಾಗ ವರ್ಗಾವಣೆ ಹಾಗೂ ನಿವೃತ್ತಿ .ಈ ಎರಡು ವಿಷಯ ಗ್ಯಾರಂಟಿ. ಆದರೆ, ಇವೆರಡರ ನಡುವಿನ ಅವಧಿಯಲ್ಲೆ ಹೇಗೆ ಕಾರ್ಯ ನಿರ್ವಹಿಸಿದ್ದೇವೆ ಎನ್ನುವುದು ಬಹಳ ಪ್ರಮುಖವಾಗಿರುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶ ಹಾಗೂ ವಕೀಲರು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಹಾಗೂ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಕೆಲವೊಮ್ಮೆ ನ್ಯಾಯಾಧೀಶರು ವಕೀಲರ ಮೇಲೆ ಹೆಚ್ಚಿನ ಒತ್ತಡ ಹಾಕುತ್ತಿರುತ್ತೇವೆ. ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ಸಿಗಬೇ… ಎನ್ನುವುದೇ ಅದಕ್ಕೆ ಕಾರಣವಾಗಿರುತ್ತದೆ. ಆ ರೀತಿ ಹೈಕೋರ್ಟ್ ನಿಂದಲೂ ನಮಗೆ ಮಾರ್ಗಸೂಚಿ ಇರುತ್ತದೆ. ನಿಮ್ಮ ಎಲ್ಲರ ಸಹಕಾರದಿಂದ ನನ್ನ ಅವಧಿಯಲ್ಲಿ ಸೇವೆ ಸಲ್ಲಿಸಿದ್ದು ನನಗೆ ಬಹಳ ಖುಷಿ ಕೊಟ್ಟಿದೆ ಎಂದರು. ಈ ಸಂಧರ್ಭದಲ್ಲಿ ಜೆ.ಎಂ. ಎಫ್. ಸಿ ಸಿವಿಲ್ ನ್ಯಾಯಾಧಿಶರಾದ ಜೆ.ರಂಗಸ್ವಾಮಿ,ವಕೀಲರ ಸಂಘದ ಅಧ್ಯಕ್ಷ ಎ. ನಂಜುಂಡಪ್ಪ,ಉಪಾಧ್ಯಕ್ಷ ರಾಮoಜಿ, ಕಾರ್ಯದರ್ಶಿ ಪ್ರಸನ್ನ ಕುಮಾರ್,ಸರ್ಕಾರಿ ಸಂಯೋಜಕರಾದ ಚಿನ್ನಸ್ವಾಮಿ,ಹಿರಿಯ ವಕೀಲರಾದ ನಂಜಪ್ಪ,ಕರುಣಾಕರ್ ರೆಡ್ಡಿ, ಅಪ್ಪಸ್ವಾಮಿ, ಎ. ಜಿ. ಸುಧಾಕರ್, ಬಿ. ಆರ್.ನರಸಿಂಹ ನಾಯ್ದು, ಶ್ರೀನಿವಾಸ್ ರೆಡ್ಡಿ,ಮುಸ್ಟಾಕ್ ಅಹ್ಮದ್, ಪಯಾಜ್ ಪಾಷ,ವಕೀಲರಾದ ಮಂಜುನಾಥ, ನಾಗಬುಷಣ, ಮಂಜುನಾಥ್, ರವಿಕುಮಾರ್, ನವೀನ್, ಸತೀಶ್, ರಮಣ, ಸೇರಿದಂತೆ ಇತರೆ ವಕೀಲರು ಇದ್ದರು.

ದೇಶ