ಜನತಾ ದರ್ಶನಕ್ಕೆ ಆಗಮಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ -ಶಾಸಕ.ಎಸ್. ಎನ್. ಸುಬ್ಬಾರೆಡ್ಡಿ


ಬಾಗೇಪಲ್ಲಿ:ತಾಲ್ಲೂಕಿನ ಸಾರ್ವಜನಿಕರ ಅನುಕೂಲಕ್ಕಾಗೂ ಸುಮಾರು ಹದಿನೈದು ವರ್ಷಗಳಿಂದ ಪ್ರತಿ ಬುಧವಾರ ನಮ್ಮ ಗೃಹ ಕಚೇರಿಯಲ್ಲಿ ಜನತಾ ದರ್ಶನ ಇರುತ್ತದೆ ಯಾವುದೇ ಸಮಸ್ಯೆ ಇದ್ದಲಿ ಜನತಾ ದರ್ಶನಕ್ಕೆ ಆಗಮಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಶಾಸಕ.ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದ್ದಾರೆ.ಪಟ್ಟಣದ ಶಾಸಕ ಎಸ್. ಎನ್ ಸುಬ್ಬಾ ರೆಡ್ಡಿ ಗೃಹ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ನೂರಾರು ಸಮಸ್ಯೆಗಳನ್ನು ಸ್ವೀಕರಿಸಿ ಆಲಿಸಿದ ಅವರು ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೆ ಪರಿಹಾರ ಕೊಡಿಸುವ ಪ್ರಯತ್ನ ಮಾಡಿದರು. ಸಾರ್ವಜನಿಕರಿಂದ ಸುಮಾರು 120 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು ಕೆಲ ಅರ್ಜಿಗಳಿಗೆ ಸ್ಥಳದಲ್ಲೇ ಸಹಿ ಹಾಕಿ ಮಂಜೂರು ಮಾಡುವಂತೆ ಸೂಚಿಸಿದ್ದಾರೆ.ವಿವಿಧ ಶಾಲಾ- ಕಾಲೇಜುಗಳಲ್ಲಿ ಸೀಟುಗಳಿಗಾಗಿ ಪೋಷಕರು ತಂದ ಅರ್ಜಿಗಳು ,ಕೊಳವೆ ಬಾವಿ ಅರ್ಜಿಗಳು, ಸಹಾಯ ಧನದ ಅರ್ಜಿಗಳು ಸೇರಿದಂತೆ ಅನಾಆರೋಗ್ಯಕ್ಕೆ ತುತ್ತಗಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಏರ್ಪಾಟು ಮಾಡಿದರು ಹಾಗೂ ಉಚಿತ ನಿವೇಶನ ಮತ್ತು ಮನೆಗಳಿಗಾಗಿ ಬಂದ ಅರ್ಜಿಗಳನ್ನು ಪಡೆದು, ತಮ್ಮ ಆಪ್ತ ಕಾರ್ಯದರ್ಶಿಗೆ ಈ ಅರ್ಜಿಗಳನ್ನು ನೀಡಿ ಕೆಲಸ ಮಾಡುವಂತೆ ಆದೇಶ ನೀಡಿದರು. ಖಾಲಿ ನಿವೇಶನಗಳಿಗೆ ಅರ್ಜಿಗಳನ್ನು ಪಡೆದು, ಸಂಬoಧಪಟ್ಟ ಇಲಾಖೆಗೆ ಕಳುಹಿಸುವಂತೆ ಆದೇಶ ನೀಡಿದರು.

ದೇಶ