ಕೋಳಿ ಪಂದ್ಯ ಹಾಗೂ ಇಸ್ಪೀಟ್ ಜೂಜು ಅಡ್ಡೆಮೇಲೆ ಪೊಲೀಸರ ದಾಳಿ


ಶ್ರೀನಿವಾಸಪುರ:ತಾಲ್ಲೂಕಿನ ನಾಗದೇನಹಳ್ಳಿ ಗ್ರಾಮದಲ್ಲಿ ರಾಜಾರೋಷವಾಗಿ ಕೋಳಿ ಪಂದ್ಯ ಹಾಗೂ ಇಸ್ಪೀಟ್ ಜೂಜು ಪಂದ್ಯ ನಡೆಯುತ್ತಿದ್ದು ಶ್ರೀನಿವಾಸಪುರ ಪೊಲೀಸರು ತೀವ್ರ ಕಾರ್ಯಚರಣೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ನಾಗದೇನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರ ಮಹೋತ್ಸವದ ಪ್ರಯುಕ್ತ ಜಾತ್ರ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದು, ಸುಮಾರು ವರ್ಷಗಳ ಹಿಂದೆ ಕೋಳಿ ಪಂದ್ಯವಾಡಿಸಿ ಜಾತ್ರೆ ನಡೆಸುವುದು ಸಾಂಪ್ರದಾಯವಾಗಿತ್ತಂತೆ. ಆದ್ರೆ ಇದನ್ನೇ ಅಸನಾಗಿ ಪರಿಗಣಿಸಿದ ಕೆಲವರು ಸಾಂಪ್ರದಾಯವನ್ನು ಬದಿಗಿಟ್ಟು ಜೂಜು ನಡೆಸಿದ್ದಾರೆ. ನಾಗದೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ತರು ಜೂಜುವಾಡಲೆಂದೆ ತಾವು ಸಾಕಿದ್ದ ಕೋಳಿಗಳನ್ನು ಕಂಕಳಲ್ಲಿ ಇಟ್ಟಿಕೊಂಡು ಸುಮಾರು 300 ಜನಕ್ಕೂ ಹೆಚ್ಚು ಜನ ಸೇರಿ ಗುಂಪುಕಟ್ಟಿಕೊಂಡು ಕೋಳಿ ಪಂದ್ಯದ ಜೂಜ ಮತ್ತು ಇಸ್ಪೀಟ್ ಜೂಜನ್ನು ರಾಜಾರೋಷವಾಗಿ ನಡೆಸಿದ್ದಾರೆ. ಇನ್ನು ಈ ಬಗ್ಗೆ ಖಚಿತ ಮಾಹಿತಿಯನ್ನು ಪಡೆದಿದ್ದ ಶ್ರೀನಿವಾಸಪುರ ಪೊಲೀಸರು ತೀವ್ರ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡ ಜೂಜುಕೋರರು ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಜೂಜು ಸ್ಥಳದಲ್ಲಿ ಸಿಕ್ಕ ಎರಡು ಕೋಳಿಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಜೂಜುಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಪೊಲೀಸ್ ವೃತ್ತ ನೀರಿಕ್ಷಕ ಜಯಾನಂದ್ ಮಾಹಿತಿ ನೀಡಿದ್ದಾರೆ.

ದೇಶ