ಕಾರ್ಮಿಕರು ದುಷ್ಟಗಳ ದಾಸರಾಗಬೇಡಿ-ಹಿರಿಯ ವಕೀಲ ಎ.ಜಿ. ಸುಧಾಕರ್


ಕಾರ್ಮಿಕರು ದಿನಪೂರ್ತಿ ಕಷ್ಟಪಟ್ಟು ದುಡಿದ ಹಣದಿಂದ ಕಾರ್ಮಿಕರು ದುಶ್ಚಟಗಳಿಗೆ ಶ್ರಮವನ್ನ ಬಲಿ ಮಾಡಬೇಡಿ ಎಂದು ಹಿರಿಯ ವಕೀಲ ಹಾಗೂ ಕಾನೂನು ಸಲಹೆಗಾರ ಎ.ಜಿ. ಸುಧಾಕರ್ ಅವರು ಸಲಹೆ ನೀಡಿದರು.ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರ ಪಕ್ಕದಲ್ಲಿ ಇರುವ ದ್ವಾರಕಾ ಫಕ್ಷನ್ ಹಾಲ್ ನಲ್ಲಿ ಭಾಗ್ಯನಗರ ಕಟ್ಟಡ ಕಾರ್ಮಿಕರ ಒಕ್ಕೂಟದ ಉದ್ಘಾಟನಾ ಹಾಗೂ ಮೇ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ಆಯೋಜನೆ ಮಾಡಲಾಗಿತ್ತು.ಈ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಸಂಘದ ಕಾನೂನು ಸಲಹೆಗಾರ ಹಾಗೂ ಹಿರಿಯ ವಕೀಲ ಎಜಿ ಸುಧಾಕರ್, ದೇಶವನ್ನು ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಬಹು ಮುಖ್ಯವಾದದ್ದು, ಕಾರ್ಮಿಕರಿಲ್ಲದ ದೇಶ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಕಾರ್ಮಿಕ ಕಷ್ಟಪಟ್ಟು ದಿನಪೂರ್ತಿ ದುಡಿದಿದ್ದನ್ನು ಮದ್ಯ ವ್ಯಸನದಿಂದ,ಗುಟ್ಕಾ ದಂತಹ ಮಾದಕ ಪದಾರ್ಥಗಳಿಗೆ ದಾಸನಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಬೇಸರ ತರುತ್ತಿದೆ. ಹಾಗಾಗಿ ಯಾವುದೇ ಕಾರ್ಮಿಕನು ದುಶ್ಚಟಗಳಿಗೆ ಬಲಿಯಾಗಬಾರದು.‌ದುಷ್ಟಗಳಿಂದ ಯಾವುದೇ ರೀತಿ ಪ್ರಯೋಜನವಾಗುವುದಿಲ್ಲ, ಬದಲಾಗಿ ಆರೋಗ್ಯಕ್ಕೆ ಹಾನಿಕಾರವೇ ಜಾಸ್ತಿ . ಹಾಗಾಗಿ ಶ್ರಮಿಸಿದ ದುಡ್ಡನ್ನು ಮಕ್ಕಳ ಶೈಕ್ಷಣಿಕ, ಕುಟುಂಬದ ನಿರ್ವಹಣೆ ಸೇರಿದಂತೆ ಹಲವು ಒಳ್ಳೆಯ ಕೆಲಸಗಳಿಗೆ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.ಈ ವೇಳೆ ಬಾಗೇಪಲ್ಲಿ ವೃತ್ತದ ಕಾರ್ಮಿಕ ನಿರೀಕ್ಷಕ ಸತ್ತೀಶ್ ಮಾತನಾಡಿ, ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ತಪ್ಪದೆ ನೋಂದಣಿ ಮಾಡಿಸಿ ಕಾರ್ಮಿಕ ಕಾರ್ಡನ್ನು ಪಡೆಯಬೇಕು. ಸರಕಾರದಿಂದ ಕಾರ್ಮಿಕರ ಕುಟುಂಬಗಳಿಗೆ ವೈಧ್ಯಕೀಯ,ಶೈಕ್ಷಣಿಕ,ವಿವಾಹ ಮಾಡಿಕೊಳ್ಳಲು ಸೇರಿದಂತೆ ಹಲವಾರು ಸೇವೆಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಬಾಗೇಪಲ್ಲಿ ವೃತ್ತದ ವ್ಯಾಪ್ತಿಯಲ್ಲಿ ಸುಮಾರು 9 ಸಾವಿರದಷ್ಟು ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಯಾವುದೇ ರೀತಿಯಲ್ಲಿ ನಕಲಿ ಕಾರ್ಡ್ ಗಳನ್ನು ಮಾಡಿಸಲು ಅವಕಾಶವಿಲ್ಲ. ಒಂದು ವೇಳೆ ಆ ರೀತಿ ನಕಲಿ ಕಾರ್ಮಿಕ ಕಾರ್ಡ್ ಗಳು ಪತ್ತೆಯಾದರೆ ಕೂಡಲೇ ರದ್ದು ಪಡಿಸಲಾಗುತ್ತದೆ ಎಂದರು.

Breaking news ಆರೋಗ್ಯ ಕೃಷಿ ಕ್ರೀಡೆ