ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ಒರ್ವ ಬಂಧನ ಮೂರು ಜನ ಆರೋಪಿಗಳಿಗಾಗಿ ಶೋಧ ಕಾರ್ಯ


ಕೋಲಾರದಲ್ಲಿ ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ನಡೆಸುತ್ತಿದ್ದ ಲ್ವರ ಪೈಕಿ ಒರ್ವನನ್ನ ಬಂಧಿಸಿದ್ದು, ಮೂರು ಜನ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕೊಲಾರದ ಗಲ್‌ಪೇಟೆ ಠಾಣೆಯ ಪೊಲೀಸರ ಕಾರ್ಯಾಚರಣೆ ನಡೆಸಿ, ಕೋಲಾರ ನಗರದ ರೆಹಮತ್ ನಗರದ ಉರ್ದು ಶಾಲೆಯ ಬಳಿ ಆನ್ ಲೈನ್ ಮೂಲಕ ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ನಡೆಸಲಾಗುತಿತ್ತು. ನಾಲ್ಕು ಜನ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ತಂಡದ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಒರ್ವನನ್ನ ವಶಕ್ಕೆ ಪಡೆದು ನಾಲ್ವರಿಗಾಗಿ ಶೋಧ ನಡೆಸುತ್ತಿದ್ದಾರೆ. ಇನ್ನೂ ಸ್ಥಳದಲ್ಲಿ ೧ ಮೋಬೈಲ್ ಫೋನ್, ೩೪೦೦ ರೂ ನಗದು ಹಣ ವಶಕ್ಕೆ ಪಡೆಯಲಾಗಿದ್ದು, ಕೋಲಾರದ ಮಹಾಲಕ್ಷ್ಮಿ ಲೇಔಟ್ ನಿವಾಸಿ ಮುಜಾಮಿಲ್ ಕ್ರಿಕೇಟ್ ಬೆಟ್ಟಿಂಗ್ ಕಿಂಗ್ ಪಿನ್ ಎನ್ನಲಾಗಿದೆ. ಆಪ್ ವೊಂದನ್ನ ಬಳಿಸಿಕೊಂಡು ಆನ್ ಲೈನ್ ಮೂಲಕ ಬೆಟ್ಟಿಂಗ್ ನಡೆಸುತಿತ್ತು ಎನ್ನಲಾಗಿದ್ದು, ಮುಜಮಿಲ್, ಕುತುಬ್ ಪಾಷಾ, ಇಮ್ರಾನ್ ಪರಾರಿಯಾಗಿದ್ದಾರೆ, ಆದ್ರೆ ನಿಜಾಮುದ್ದಿನ್ ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ.

ದೇಶ