ಬಾರ್ ನಲ್ಲಿ ಕಿರಿಕ್-ಚೂರಿಯಿಂದ ತಲೆ ಕೈ ಕಾಲು ಹೊಟ್ಟೆಗೆ ಚಾಕುವಿನಿಂದ ಇರಿತ..!


ಕುಡಿದ ಅಮಲಿನಲ್ಲಿ ಬಾರ್ ನಲ್ಲಿ ಅಡ್ಡ ಬಂದು ಭುಜ ತಗುಲಿಸಿದ ಅಂತ ಕಿರಿಕ್ ತೆಗೆದ ಯುವಕರು ವ್ಯಕ್ತಿಗೆ ಚೂರಿಯಿಂದ ಮನಸ್ಸೊಇಚ್ಛೆ ಇರಿದಿರುವ ಭಯಾನಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ಸೆವೆನ್ ಹಿಲ್ಸ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ತಡರಾತ್ರಿ ನಡೆದಿದೆ. ಅಂದ ಹಾಗೆ ಗೌರಿಬಿದನೂರು ನಗರದ ನಿವಾಸಿ ರಮೇಶ್ ಎಂಬಾತ ಕಳೆದರಾತ್ರಿ ಶಿವ ಬಾರ್ ನಲ್ಲಿ ಮಧ್ಯ ಸೇವಿಸಲು ತೆರಳಿದ್ದಾಗ ಅಲ್ಲಿ ಆಗಲೇ ಕಂಠಪೂರ್ತಿ ಮಧ್ಯ ಸೇವಿಸಿದ್ದ ಪವನ್ ಹಾಗೂ ಮಣಿಕಂಠ ಎಂಬ ಅಡ್ಡ ಬಂದಿದ್ದಾರೆ ಈ ವೇಳೆ ಆಕಸ್ಮಿಕ ಭುಜ ತಗುಲಿದ ಪರಿಣಾಮ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಬೇಸರ ಮಾಡಿಕೊಂಡು ಅಲ್ಲಿಂದ ಹೊರಬಂದ ರಮೇಶ್ ಪಕ್ಕದ ಸೆವೆನ್ ಹಿಲ್ಸ್ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಮಧ್ಯ ಸೇವನೆ ಮಾಡಲು ಮುಂದಾಗಿದ್ದ.
ಆ ಸಮಯದಲ್ಲಿ ಈತನನ್ನ ಹುಡುಕಿಕೊಂಡು ಬಂದ ಮಣಿಕಂಠ ಹಾಗೂ ಪವನ್ ಚೂರಿಯಿಂದ ರಮೇಶ್ ಇರಿದಿದ್ದಾರೆ. ಇದರಿಂದ ಗಂಭೀರವಾಗಿ ರಕ್ತಸಿಕ್ತವಾಗಿ ಗಾಯಗೊಂಡ ರಮೇಶ್ ಎಂಬಾತನನ್ನ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಗೌರಿಬಿದನೂರು ನಗರ ಪೊಲೀಸ್ರು ಆರೋಪಿಗಳಾದ ಮಣಿಕಂಠ ಹಾಗೂ ಪವನ್ ನನ್ನ ಬಂಧಿಸಿದ್ದಾರೆ.

Breaking news ಕ್ರೈಂ ತಾಲ್ಲೂಕು ಸುದ್ದಿ ನಮ್ಮ ಚಿಕ್ಕಬಳ್ಳಾಪುರ