ಸಮರ್ಪಕ ಕುಡಿಯುವ ನೀರಿಗಾಗಿ ಒತ್ತಾಯಿಸಿ, ರಸ್ತೆ ತಡೆದು ಪ್ರತಿಭಟನೆ.


ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು,ನಗರಸಭೆಯವರು ಕಳೆದ ಮೂರು ತಿಂಗಳುಗಳಿಂದ ವಾರ್ಡ್ ಗೆ ಕುಡಿಯುವ ನೀರುಸಮರ್ಪಕವಾಗಿ ಬಿಡುತ್ತಿಲ್ಲವೆಂದು ಆರೋಪಿಸಿ ಮಹಿಳೆಯರು, ಮಕ್ಕಳು ಹಾಗೂ ವೃದ್ದರು ಖಾಲಿ ಬಿಂದಿಗೆಗಳೊಂದಿಗೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ನಗರಸಭೆ ಅಧಿಕಾರಿಗಳ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ತಿಂಗಳುಗಳಿಂದ ನಮ್ಮ ವಾರ್ಡಗೆ ತಿಂಗಳು ಕಳೆದರೂ ಸಮರ್ಪಕವಾಗಿ ಕುಡಿಯುವ ನೀರು ಬೀಡುತ್ತಿಲ್ಲವೆಂದು ಆರೋಪಿಸಿ ಚಿಂತಾಮಣಿ ನಗರದ ವಾರ್ಡನಂ ೧೬ ರ ಇಡ್ಲಿಪಾಳ್ಯದ ನಿವಾಸಿಗಳು ಚೇಳೂರು ರಸ್ತೆಯಲ್ಲಿನ ಪಂಪ್ ಹೌಸ್ ಬಳಿ ಖಾಲಿ ಬಿಂದಿಗಳೊಂದಿಗೆ ಜಮಾಯಿಸಿ ಚೇಳೂರು ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡಿ ನಗರಸಭೆ ಅಧಿಕಾರಿಗಳ ವಿರುದ್ದ ದಿಕ್ಕಾರಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾದ್ಯಮದವರೊಂದಿಗೆ ಮಾತನಾಡಿದ ಪ್ರತಿಭಟನಾ ನಿರತರು ಕಳೆದ ಮೂರು ತಿಂಗಳುಗಳಿAದ ನಮ್ಮ ವಾರ್ಡ್ ಗೆ ಸಮರ್ಪಕವಾಗಿ ಕುಡಿಯುವ ನೀರು ಬೀಡುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ನಗರಸಭೆಯವರಿಗೆ ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನವಾಗದ ಕಾರಣ ನೀರಿನ ಸಮಸ್ಯೆ ಹೆಚ್ಚಾಗಿ ಇಂದು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿರುವುದಾಗಿ ತಿಳಿಸಿದರು. ಇನ್ನೂ ಪ್ರತಿಭಟನಾ ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಬೇಟಿ ನೀಡಿ ಪ್ರತಿಭಟನಾಕಾರದೊಂದಿಗೆ ಮಾತುಕತೆ ನಡೆಸಿ ಕೂಡಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

ತಾಲ್ಲೂಕು ಸುದ್ದಿ ನಮ್ಮ ಚಿಕ್ಕಬಳ್ಳಾಪುರ ರಾಜ್ಯ ಸುದ್ದಿ