ಬೀದಿ ನಾಯಿಗಳ ಕಾಟ,ಸಿಮೆ ಹಸು ಸಾವು


ಕೆಲವು ಕಡೆ ಮಕ್ಕಳ ಮೇಲೂ ಅಟ್ಯಾಕ್ ಮಾಡುತ್ತಿವೆ ಬೀದಿ ನಾಯಿಗಳ ಕಾಟ ತಪ್ಪಿಸಿ ಜೀವ ಉಳಿಸಿ ಎಂದು ಗ್ರಾಮಸ್ಥರು ಒತ್ತಾಯಿಸುತಿದ್ದಾರೆ.ಹೌದು ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ ಎಲ್ಲೆಂದರಲ್ಲೆ ಮಕ್ಕಳು ಪ್ರಾಣಿ ಪಕ್ಷಿಗಳ ಮೇಲೂ ಅಟ್ಯಾಕ್ ಮಾಡಿ ಜೀವ ತೆಗೆಯುತ್ತಿವೆ ನಿನ್ನೆ ರಾತ್ರಿ ಚಿಕ್ಕಬಳ್ಳಾಪುರ ತಾಲ್ಲೂಕು ಹುನೇಗಲ್ ಗ್ರಾಮದ ವಾಸಿ ಸೊಣ್ಣಪ್ಪ ಎಂಬುವರ ಸೀಮೆ ಹಸು ಪಡ್ಡೆ ಮೇಲೆ ಬೀದಿನಾಯಿಗಳ ಹಾವಳಿಯಿಂದ ಸಾವನ್ನಪ್ಪಿದೆ ರಾತ್ರಿ ವೇಳೆ ಗುಂಪು ಗುಂಪಾಗಿ ಬಂದು ದಾಳಿ ಮಾಡುವ ನಾಯಿಗಳ ಕೈಗೆ ಮನುಷ್ಯರೇನಾದ್ರು ಸಿಕ್ಕರೆ ಎನು ಗತಿ ಅನ್ನುವಂತಾಗಿದ್ದು ಕುರಿ ಕೋಳಿಗಳ ಮೇಲೂ ದಾಳಿ ಮಾಡಿ ಸಾಯಿಸುತ್ತಿವೆ ಹಾಗಾಗಿ ಆಯಾ ಗ್ರಾಮಪಂಚಾಯಿತಿ ಅಧಿಕಾರಿಗಳು ಈ ಕಡೆ ಗಮನ ಹರಿಸಿ ನಾಯಿಗಳ ಹದ್ದುಬಸ್ತಿಗೆ ಕ್ರಮ ಜರಿಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ದೇಶ