ಕೋಲಾರದಲ್ಲಿ ಮುಂದುವರೆದ ಮಳೆಯ ಆರ್ಭಟ ಭಾರೀ ಗಾಳಿ, ಆಲಿಕಲ್ಲು ಮಳೆಗೆ ನೆಲಕಚ್ಚಿದ ಬೆಳೆಗಳು


ಮಳೆರಾಯನ ಆರ್ಭಟ ಕೋಲಾರದಲ್ಲಿ ಮುಂದುವರೆದಿದ್ದು ತಡ ರಾತ್ರಿ ಸುರಿದ ಬಾರಿ ಮಳೆಗೆ ಜಿಲ್ಲೆಯ ಕೆಲ ರೈತರು ಬೆಳೆದಿದ್ದ ಟಮೋಟೋ ಬಾಳೆಹಣ್ಣು ಸೇರಿದಂತೆ ಹಲವು ಬೆಳೆಗಳು ಮಳೆಗೆ ತುತ್ತಾಗಿ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕೋಲಾರದಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಗಾಳಿ ಮಳೆಯಿಂದ ತೀವ್ರ ಪ್ರಮಾಣ ಬೆಳೆಗೆಳು ನೆಲಕಚ್ಚಿದೆ. ಜಿಲ್ಲಾಡಳಿತ ಸರ್ಕಾರದಿಂದ ನಷ್ಟ ಪರಿಹಾರ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ಧಾರೆ. ಕೋಲಾರ ತಾಲ್ಲೂಕಿನ ಅಮ್ಮೇರಹಳ್ಳಿ ಗ್ರಾಮದ ರೈತ ನವೀನ್ ಎಂಬುವವರು ಬೆಳೆದಿದ್ದ ಟಮೋಟೋ ಬೆಳೆ ಅಲಿಕಲ್ಲು ಸಹಿತ ಮಳೆಗೆ ತುತ್ತಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಳಾಗಿದೆ. ಸಾಲ ಸೋಲ ಮಾಡಿ ಟಮೋಟೋ ಬೆಳೆ ಇಟ್ಟಿದ್ದ ರೈತ ನವೀನ್‌ಗೆ ಉತ್ತಮ ಇಳುವರಿ ಹಾಗೂ ಬೆಲೆಯ ನಿರೀಕ್ಷೆಯಲ್ಲಿದ್ದ. ಆದರೆ ಮಳೆ ತೀವ್ರ ಆಘಾತ ನೀಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಟಾಗಿ ಬರಬೇಕಿದ್ದ ಬೆಳೆ ಅಲಿಕಲ್ಲು ಸಹಿತ ಬಿದ್ದ ಮಳೆಗೆ ತುತ್ತಾಗಿ ನಷ್ಟ ಉಂಟಾಗಿದೆ ಸರ್ಕಾರ ಕೂಡಲೇ ಮಳೆಯಿಂದ ಉಂಟಾಗಿರುವ ನಷ್ಟ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಜಂಗಂಬಸಾಪುರ ಗ್ರಾಮದಲ್ಲಿ ರೈತ ಬಸವರಾಜು ಮೂರು ಎಕರೆಯಲ್ಲಿ ಬೆಳೆದಿದ್ದ ಬಾಳೆ ಬೆಳೆ ಬಿರುಗಾಳಿ ಸಹಿತ ಬಿದ್ದ ಮಳೆಗೆ ನೆಲಕಚ್ಚಿದೆ. ಉತ್ತಮ ಇಳುವರಿ ಬಂದಿದ್ದ ಬಾಳೆ ಬೆಳೆ ಇನ್ನೇನು ಕಟಾಗಿವಿನ ಹಂತದಲ್ಲಿತ್ತು, ಬಿರುಗಾಳಿ ಸಹಿತ ಬಿದ್ದ ಮಳೆಗೆ ಬಾಳೆಹಣ್ಣಿನ ಬೆಳೆ ಮಳೆಗೆ ಸಿಲುಕಿ ನೆಲಕಚ್ಚಿದೆ ಇದರಿಂದ ರೈತ ಬಸವರಾಜುಗೆ ಸುಮಾರು ೩ ಲಕ್ಷ ರೂ ನಷ್ಟ ಉಂಟಾಗಿದೆ ನಷ್ಟ ಪರಿಹಾರಕ್ಕಾಗಿ ಜಿಲ್ಲಾಡಳಿತ ಕಡೆ ಮುಖ ಮಾಡಿದ್ದಾರೆ.
ಬಿರುಗಾಳಿ ಸಹಿತ ಬಿದ್ದ ಮಳೆಗೆ ರಸ್ತೆ ಬದಿ ಇದ್ದ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಸರಬರಾಜಿನಲ್ಲಿ ಕೆಲ ಕಾಲ ವ್ಯತ್ಯಾಸ ಉಂಟಾಗಿತ್ತು ಸ್ಥಳಕ್ಕೆ ಬೆಸ್ಕಾಂ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದ ಮರಗಳನ್ನು ತೆರವು ಗೊಳಿಸಿದ್ದಾರೆ. ಜಂಗಂಬಸಾಪುರ ಗ್ರಾಮದಲ್ಲಿ ದಿ.೧೨ ರಂದು ಮಧ್ಯಾಹ್ನ ಬಿದ್ದ ಬಿರುಗಾಳಿ ಸಹಿತ ಮಳೆಗೆ ಹಲವೆಡೆ ಕರೆಂಟ್ ಕಟ್ ಹಾಗಿದ್ದು ಇಡೀ ರಾತ್ರಿ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಜನರು ಕಾಲ ಕಳೆಯುವ ಪರಿಸ್ಥಿತಿ ಎದುರಾಗಿತ್ತು.
ಮಳೆಯಿಂದ ತೀವ್ರ ನಷ್ಟಕ್ಕೆ ಗುರಿಯಾಗಿರುವ ರೈತರ ನೆರವಿಗೆ ಜಿಲ್ಲಾಡಳಿತ ಕೂಡಲೇ ದಾವಿಸಿ ರೈತರ ನೋವಿಗೆ ಸ್ಪಂದಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

ದೇಶ