ಮತಪೆಟ್ಟಿಗೆಯ ಸ್ಟ್ರಾಂಗ್ ರೂಂ ನಲ್ಲಿ ಭದ್ರತಾ ಲೋಪ


ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆ ಎಪ್ರಿಲ್ 26ರಂದು ನಡೆಯಿತು ಅಂದು ನಡೆದ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣಾ ವ್ಯಾಪ್ತಿಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರ ಮತಯಂತ್ರಗಳನ್ನ ಚಿಕ್ಕಬಳ್ಳಾಪುರ ಹೊರವಲಯದಲ್ಲಿರುವ ಇರುವ ನಾಗಾರ್ಜುನ ಕಾಲೇಜಿನಲ್ಲಿನ ಬದ್ರತಾ ಕೊಠಡಿಗಳಲ್ಲಿ ಬದ್ರಪಡಿಸಲಾಗಿದೆ ಆದ್ರೆ ಮಳೆ ಕಾರಣವೋ ಎನೋ ಗೊತ್ತಿಲ್ಲ ಸ್ಟಾಂಗ್ ರೂಮ್ ಕಿಟಕಿ ಬಾಗಿಲು ಮುರಿದಿದೆ ಇದು ಬದ್ರತಾ ಲೊಫವಾ ಅನ್ನೋ ಅನುಮಾನ ಮೂಡುತ್ತಿದೆ

ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ನಡೆದು ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನ ಚಿಕ್ಕಬಳ್ಳಾಪುರ ಹೊರವಲಯ ನಾಗಾರ್ಜುನ ಇಂಜನಿಯರಿಂಗ್ ಕಾಲೇಜು ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ ಮೂರು ಹಂತದ ಕಣ್ಗಾವಲಿನಲ್ಲಿರುವ ಬದ್ರತಾ ಕೊಠಡಿ ಕಿಟಿಕಿ ಬಾಗಿಲು ಮುರಿದು ಬಿದ್ದಿದೆ ಗಾಜು ಪುಡಿಪುಡಿಯಾಗಿದೆ ಇದು ಹೇಗೆ ಆಯಿತು ಅನ್ನೊ ಅನುಮಾನ ಮೂಡತೊಡಗಿದೆ ಮೂರನೆ ಹಂತಸ್ತಿನಲ್ಲಿ ದಕ್ಷಿಣ ಬಾಗದ ಕೊಠಡಿಯಲ್ಲಿ 181 ಬಾಗದ ನೆಲಮಂಗಲ ವಿಧಾನಸಭಾ ಕ್ಷೇತ್ರದ ಮತಯಂತ್ರಗಳಿಟ್ಟಿರುವ ಕೊಠಡಿ ಎಂದು ಹೇಳಲಾಗುತಿದ್ದು ಕಿಟಕಿ ರೆಕ್ಕೆಗಳು ಕಳಚಿ ಬಿದ್ದಿರುವ ದೃಶ್ಯ ಸಿಸಿ ಟಿವಿಯಲ್ಲೂ ಸೆರೆಯಾಗಿದೆ ಎನ್ನಲಾಗಿದೆ ಘಟನೆ ವೀಕ್ಣಿದ ತಕ್ಷಣ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳಿಗೂ ಮಾಹಿತಿ ನೀಡಿ ಚುನಾವಣಾ ಅಭ್ಯರ್ಥಿಗಳು, ಏಜೆಂಟರು ಸಮ್ಮುಖದಲ್ಲಿ ಕಿಟಕಿ ರೆಕ್ಕೆಗಳ ರಿಪೇರಿ ಮಾಡಿ ತಗಡು ಶೀಟ್ ಗಳಿಂದ ಬದ್ರಪಡಿಸಲಾಗಿದೆ ಸ್ಥಳಕ್ಕೆ ಬೇಟಿ ನೀಡಿದ್ದ ಜಿಲ್ಲಾದಿಕಾರಿ ರವೀಂದ್ರ ಸಹ ಸ್ಟ್ರಾಂಗ್ ರೂಂ ದಕ್ಕೆ ಬಗ್ಗೆ ಹೆಚ್ಚುವರಿ ತನಿಖೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ ಇದರಲ್ಲೇನಾದ್ರು ಅಧಿಕಾರಿಗಳ ನಿರ್ಲಕ್ಷ್ಯದ ನಡೆದಿತ್ತಾ ಎನ್ನುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎನ್ನಲಾಗಿದೆ.

Breaking news ದೇಶ ರಾಜಕೀಯ ರಾಜ್ಯ ಸುದ್ದಿ