ಕೆ ಎಂ ಡಿ ಕಲ್ಯಾಣ ಮಂಟಪದಲ್ಲಿ ಬಸವ ಜಯಂತಿ‌ ಆಚರಣೆ


ಕೆ ಎಂ ಡಿ ಕಲ್ಯಾಣ ಮಂಟಪದಲ್ಲಿ ಬಸವ ಜಯಂತಿ‌ ಆಚರಣೆ ಚಿಂತಾಮಣಿ ನಗರದ ಕೆ ಎಂ ಡಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ‌ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಸಮುದಾಯದ ಮುಖಂಡರು ಬಸವಣ್ಣನವರ ಭಾವಚಿತ್ರಕ್ಕೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ ಪೂಜೆ ಪುಷ್ಪನಮನ ಸಲ್ಲಿಸುವ ಮೂಲಕ ಬಸವ ಜಯಂತಿಯನ್ನು ಆಚರಿಸಿದರು.ನಂತರ ಕಿಶೋರ್ ಶಾಲೆಯ ಶಿಕ್ಷಕರಾದ ವಿಜಯ ಕುಮಾರ್ ಎಂ ಗಂಗಾವತಿ ರವರು ಮಾತನಾಡಿ ಇಡೀ ಮಾನವ ಕುಲದ ಏಳಿಗೆಗೆ ಶ್ರಮಿಸಿದವರು ಬಸವಣ್ಣನವರು.ಸಮ ಸಮಾಜದ ನಿರ್ಮಾಣಕ್ಕೆ ದುಡಿದು ಜಗತ್ತಿನ ಮೊದಲ ಸಂಸತ್ತು ನಿರ್ಮಿಸಿ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದವರು ಎಂದು ಹೇಳಿದವರು ‘ಇವನಾರವ ಇವನಾರವ ಎನ್ನಿಸದೇ ಇವನಮ್ಮವ ಇವನಮ್ಮವ ಎಂದೆನಿಸಯ್ಯ’ಎಂದು ಬಸವಣ್ಣನವರು ಹೇಳಿದಂತೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಮೇಲು ಕೀಳಿನ ವಿರುದ್ಧ ಹೋರಾಡಿದ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕೆಎಂಡಿ ಕಲ್ಯಾಣ ಮಂಟಪ ಮಾಲೀಕರಾದ ಮಂಜುನಾಥ್.ಸ್ನೇಹ ಜೆರಾಕ್ಸ್ ಮಾಲೀಕರಾದ ಎಸ್ ಸುರೇಶ್. ಮಣಿಕಂಠ.ನಲ್ಲರಾಜು.ನಟರಾಜ್. ರಾಜಶೇಖರ್ ಯಾಗಂಟಿ.ಆರ್ ಮಂಜುನಾಥ್.ಹಿರಿಯ ಪತ್ರಕರ್ತರಾದ ಎನ್ ನಟರಾಜ್.ಧೂಪಂ ಪ್ರಸಾದ್. ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಕ್ರೀಡೆ