ಸೇತುವೆಗೆ ಗುದ್ದಿ ಕಂದಕಕ್ಕೆ ಉರುಳಿದ ಕಾರು

ರಾಷ್ಟ್ರೀಯ ಹೆದ್ದಾರಿ ೪೮ ರ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪಟ್ಟಣದ ಹೊರವಲಯದಲ್ಲಿರುವ ರೈಲ್ವೇ ಸೇತುವೆ ಬಳಿ ಸ್ಕಾರ್ಪಿಯೋ ಕಾರೊಂದು ಸೇತುವೆಗೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿದ್ದು, ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಾರು ಚಾಲಕ ಸಚ್ಚಿನ್(೨೧) ಮೃತ ರ್ದುದೈವಿಯಾಗಿದ್ದು, ಮೂಲತಹ ರಾಜಸ್ಥಾನದವನೆನ್ನಲಾಗಿದ್ದು, ದಾಬಸ್ ಪೇಟೆ ಕೈಗಾರಿಕಾ ಪ್ರದೇಶದ ಟ್ರಾನ್ಸ್ ಪೋರ್ಟ್ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ.ಬೆಂಗಳೂರಿನಿAದ-ತುಮಕೂರಿನ ಕಡೆಗೆ ಹೋಗುತ್ತಿದ್ದ ಕಾರು ಸೋಮವಾರ ರಾತ್ರಿ ಸುಮಾರು ೧೦.೪೫ ಗಂಟೆಗೆ, ಸೇತುವೆಗೆ ಗುದ್ದಿ ಪಲ್ಟಿಯಾಗಿದೆ, ಮೇಲ್ನೋಟಕ್ಕೆ ಎಡದಿಂದ ಓವರ್ ಟೇಕ್ ಮಾಡುವಾಗ ಘಟನೆ ಸಂಭವಿಸಿದೆ ಎನ್ನಲಾಗುತ್ತಿದ್ದು, ಕಾರು ನಜ್ಜು-ಗುಜ್ಜಾಗಿದೆ. ಸ್ಥಳಕ್ಕೆ ದಾಬಸ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Breaking news ರಾಜ್ಯ ಸುದ್ದಿ