ನೀರಿಗಾಗಿ ಖಾಲಿ ಕೊಡ ಹಿಡಿದು ಪ್ರತಿಭಟಿಸಿದ ಮಹಿಳೆಯರು


ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರು ತಾಲ್ಲೂಕಿನ ಇಡಗೂರು ಗ್ರಾಮ ಪಂಚಾಯಿತಿ ೨ ನೇ ವಾರ್ಡ್ ನಲ್ಲಿ ಯುಗಾದಿ ಹಬ್ಬದ ದಿನ ಬಂದಿದ್ದ ನೀರು ಇಲ್ಲಿಯವರೆಗೂ ಬಂದಿಲ್ಲ ಎಂದು ಗ್ರಾಮದ ಮಹಿಳೆಯರು ಪಿಡಿಒ ಮತ್ತು ಸದಸ್ಯರ ವಿರುದ್ಧ ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಗೌರಿಬಿದನೂರು ಇಡಗೂರ ಗ್ರಾಮದಲ್ಲಿ ಒಂದೇ ದಿನ ಮೂರು ಮೋಟರ್ ಸುಟ್ಟು ಹೋಗಿದ್ದು ಎರಡು ದಿನಕ್ಕೊಮ್ಮೆ ಟ್ಯಾಂಕರ್ ನ ಮೂಲಕ ನೀರು ಬರುತ್ತಿದೆ. ಟ್ಯಾಂಕರ್ ಬಂದರೂ ಸಹ ನೂಕು ನುಗ್ಗಲಿಲ್ಲ ಎರಡು ಬಿಂದಿಗೆಗಳಷ್ಟು ನೀರು ಹಿಡಿದುಕೊಳ್ಳುತ್ತಿದ್ದೇವೆ. ದನ, ಕರು, ಮೇಕೆಗಳಿಗೆ ಕುಡಿಯಲು ನೀರಿಲ್ಲದಂತೆ ಆಗಿದೆ ಎಂದು ಗ್ರಾಮದ ಮಹಿಳೆಯರು ತಿಳಿಸಿದ್ದಾರೆ. ತಾಲೂಕಿನಲ್ಲಿ ನೀರಿನ ಸಮಸ್ಯೆ ಇದ್ದಲ್ಲಿ ತಹಸೀಲ್ದಾರ್ ರವರ ಗಮನಕ್ಕೆ ತಂದಲ್ಲಿ ನೀರಿನ ಸಮಸ್ಯೆ ನೀಗಿಸಲಾಗುವುದು ಎಂದು ಈ ಹಿಂದೆ ಶಾಸಕರು ಮತ್ತು ತಹಸೀಲ್ದಾರ್ ರವರು ಹಲವು ವೇದಿಕೆಗಳಲ್ಲಿ ತಾಲ್ಲೂಕಿನ ಜನತೆಗೆ ತಿಳಿಸಿರುತ್ತಾರೆ. ಆದರೆ ನಾವು ಯಾರ ಬಳಿ ಹೋಗಿ ನೀರಿನ ಕಷ್ಟ ಹೇಳಿಕೊಂಡರು ಪ್ರಯೋಜನವಿಲ್ಲ ಎಂದು ಅವಲತ್ತುಕೊಂಡಿದ್ದಾರೆ.

ಆರೋಗ್ಯ ನಮ್ಮ ಚಿಕ್ಕಬಳ್ಳಾಪುರ