ರಾಜಮಂಡ್ರಿಗೆ ಡಾ.ಕೆ.ಸುಧಾಕರ್ ಚುನಾವಣಾ ಉಸ್ತುವಾರಿಯಾಗಿ ನೇಮಕ


ರಾಜಮಂಡ್ರಿಗೆ ಡಾ.ಕೆ.ಸುಧಾಕರ್ ಚುನಾವಣಾ ಉಸ್ತುವಾರಿಯಾಗಿ ನೇಮಕ
ಎನ್‌ಟಿಆರ್ ಪುತ್ರಿ ಸ್ಪರ್ಧಿಸಿರುವ ಆಂದ್ರದ ರಾಜಮಂಡ್ರಿ ಕ್ಷೇತ್ರ
ಆಂಧ್ರಪ್ರದೇಶದ ಬಿಜೆಪಿ ರಾಜ್ಯಧ್ಯಕ್ಷೆ ಎನ್‌ಟಿಆರ್ ಪುತ್ರಿ ಪುರಂದೇಶ್ವರಿ ಸ್ಪರ್ಧೆ ಮಾಡಿರುವ ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿಯನ್ನಾಗಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ರವರನ್ನು ನೇಮಿಸಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಕೆ.ಸುಧಾಕರ್ ತೆಲುಗು ಭಾಷೆ ಮೇಲೆ ಹಿಡಿತವನ್ನು ಹೊಂದಿದ್ದು, ಕರ್ನಾಟಕದ ಗಡಿಗೆ ಹೊಂದಿಕೊAಡಿರುವ ಆಂಧ್ರ ಪ್ರದೇಶದೊಂದಿಗೆ ಒಡನಾಟ ಇಟ್ಟುಕೊಂಡಿದ್ದು, ಆಂದ್ರ ಪ್ರದೇಶದ ರಾಜಮಂಡ್ರಿ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನಾಗಿ ಸುಧಾಖರ್‌ರವರನ್ನು ನೇಮಿಸಲಾಗಿದೆ. ತೆಲುಗು ಭಾಷೆಯನ್ನು ಸುಲಲಿತವಾಗಿ ಮಾತನಾಡುವ ಡಾ.ಕೆ.ಸುಧಾಕರ್‌ರವರನ್ನು ಈ ಹಿಂದೆ ಹೈದರಾಬಾದ್ ಮಹಾನಗರ ಪಾಲಿಕೆ ಹಾಗು ತೆಲಂಗಾಣ ವಿದಾನಸಭಾ ಚುನಾವಣಾ ಸಂದರ್ಭದಲ್ಲೂ ಜವಬ್ದಾರಿಯನ್ನು ವಹಿಸಿಕೊಂಡಿದ್ದರು.

Breaking news ಕೃಷಿ ದೇಶ ನಮ್ಮ ಚಿಕ್ಕಬಳ್ಳಾಪುರ ರಾಜಕೀಯ ರಾಜ್ಯ ಸುದ್ದಿ