ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….!


ಸದ್ಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್,ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಬೇಕು. ಈ ಮಧ್ಯೆ ಕುಟುಂಬದ ಹೆಸರು ತರೋದು ಏಕೆ ಎಂದು ಹೆಚ್,ಡಿ.ಕೆ. ಕಿಡಿಕಾರಿದ್ದಾರೆ.ರಾಜ್ಯದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್ ಡ್ರೈವ್ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದು, ಕಾಂಗ್ರೇಸ್ ಪಕ್ಷಕ್ಕೆ ಚುನಾವಣಾ ಸಮಯದಲ್ಲಿ ಒಳ್ಳೆಯ ಅಸ್ತ್ರ ಸಿಕ್ಕಂತಾಗಿದೆ. ಈ ಕುರಿತು ಪರ ಹಾಗೂ ವಿರೋಧ ಚರ್ಚೆಗಳೂ ಸಹ ಜೋರಾಗಿದೆ. ಈ ಸಂಬಂಧ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕಾಗುತ್ತದೆ. ಸರ್ಕಾರ ಎಸ್.ಐ.ಟಿ. ರಚನೆ ಮಾಡಿದ್ದಾರೆ. ಈ ನೆಲದ ಕಾನೂನಿನ ಪ್ರಕಾರ ತಪ್ಪು ಮಾಡಿದ್ದರೇ ಶಿಕ್ಷೆ ಅನುಭವಿಸಬೇಕು. ಇಲ್ಲಿ ವ್ಯಕ್ತಿಯ ಬಗ್ಗೆ ಚರ್ಚೆ ಮಾಡಬೇಕೆ ವಿನಃ ಕುಟುಂಬದ ಬಗ್ಗೆ ಅಲ್ಲ. ಕುಟುಂಬದ ಹೆಸರು ತರೋದು ಏಕೆ? ದೇವೆಗೌಡರು, ಕುಮಾರಸ್ವಾಮಿ ಅಂತ ಮಧ್ಯೆ ತರೋದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.ನಾನು ಯಾರ ಪರ ವಹಿಸಿಕೊಂಡು ಮಾತನಾಡುತ್ತಿಲ್ಲ. ಎಸ್.ಐ.ಟಿ. ರಚನೆ ಆಗಿದೆ, ಎಫ್.ಐ.ಆರ್‍ ಹಾಕಿದ್ದಾರೆ. ತನಿಖೆ ನಡೆದ ಬಳಿಕ ಸತ್ಯಾಂಶ ಹೊರಬರಲಿ. ನಮ್ಮ ಗಮನಕ್ಕೆ ಬಂದಿದ್ದರೇ ಮುಜುಗರ ತಪ್ಪಿಸಬಹುದಿತ್ತು. ದಿನನತ್ಯ ಯಾರು ಎಲ್ಲಿಗೆ ಹೋಗ್ತಾರೆ, ಬರ್ತಾರೆ ಅಂತಾ ಕಾಯಲು ಆಗುತ್ತಾ. ಪ್ರಜ್ವಲ್ ವಿರುದ್ದ ಪಕ್ಷದಿಂದಲೂ ಕ್ರಮ ತೆಗೆದುಕೊಳ್ಳುತ್ತೇವೆ. ದೇವೇಗೌಡರು ಹಾಗೂ ನಾನು ಮಹಿಳೆಯರ ಬಗ್ಗೆ ಗೌರವಯುತವಾಗಿ ನಡೆದುಕೊಂಡಿದ್ದೇವೆ ಎಂದು ಹೆಚ್.ಡಿ.ಕೆ. ನುಡಿದಿದ್ದಾರೆ.

Breaking news ಕ್ರೈಂ ದೇಶ ನಮ್ಮ ಚಿಕ್ಕಬಳ್ಳಾಪುರ ರಾಜಕೀಯ ರಾಜ್ಯ ಸುದ್ದಿ