ದಾರಿ ತಪ್ಪಿದ ಮೊಮ್ಮಗನನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಿದ ಹೆಚ್.ಡಿ.ದೇವೇಗೌಡ!

ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆಯ ಪೆನ್ ಡ್ರೈವ್ ಪ್ರಕರಣ ದೇಶಾದ್ಯಂತ ಸುದ್ದಿಯಾಗುತ್ತಿದ್ದಂತೆಯೇ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ತಮ್ಮ ಮೊಮ್ಮಗ, ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.ಪ್ರಜ್ವಲ್ ರೇವಣ್ಣ ಪ್ರಕರಣದಿಂದಾಗಿ ಜೆಡಿಎಸ್ ಪಕ್ಷ ಮಾತ್ರವಲ್ಲದೇ ರಾಜ್ಯದ ಎನ್ ಡಿಎ ಮೈತ್ರಿ ಕೂಟಕ್ಕೆ ಭಾರೀ ಮುಜುಗರ ಉಂಟಾದ ಬೆನ್ನಲ್ಲೇ ಇದೀಗ ದೇವೇಗೌಡರು ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.ಇನ್ನೂ ತಮ್ಮ ಪುತ್ರ ಹೆಚ್.ಡಿ.ರೇವಣ್ಣ ವಿರುದ್ಧವೂ ದೇವೇಗೌಡರು ಕ್ರಮಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಎ1 ಆರೋಪಿಯಾಗಿ ದೇವೇಗೌಡರ ಹಿರಿಯ ಪುತ್ರ ಹೆಚ್.ಡಿ.ರೇವಣ್ಣ ಅವರನ್ನು ಗುರುತಿಸಲಾಗಿದೆ. ಹೀಗಾಗಿ ಅವರ ವಿರುದ್ಧವೂ ಕ್ರಮಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Breaking news ಕ್ರೈಂ ದೇಶ ನಮ್ಮ ಚಿಕ್ಕಬಳ್ಳಾಪುರ ರಾಜಕೀಯ ರಾಜ್ಯ ಸುದ್ದಿ