ಕುಡಿದ ಅಮಲಿನಲ್ಲಿ ಕಾರು ಚಾಲನೆ, ಬೈಕ್, ಆಟೋ ಹಾಗೂ ವೃದ್ದೆಗೆ ಡಿಕ್ಕಿ, ಸರಣಿ ಅಪಘಾತ.


ಚಿಕ್ಕಬಳ್ಳಾಪುರ: ಕಾರು ಚಾಲಕನೊಬ್ಬ ಕುಡಿದ ಅಮಲಿನಲ್ಲಿ ಕಾರು ಚಾಲನೆ ಮಾಡಿ ಆಟೋ, ದ್ವಿಚಕ್ರ ವಾಹನ ಹಾಗೂ ಪಾದಾಚಾರಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಕಾರು ಚಾಲನೆ ಮಾಡಿ ಸರಣಿ ಅಪಘಾತಕ್ಕೆ ಕಾರಣರಾಗಿರುವ ವ್ಯಕ್ತಿ ನಗರದ ಪೆಟ್ರೋಲ್ ಬಂಕ್ ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಆಂದ್ರಪ್ರದೇಶದ ರಾಮಸಮುದ್ರ ಮೂಲದ ಚರಣ್‌ರಾಗಿದ್ದಾರೆ.
ಚರಣ್ ಕಂಠಪೂರ್ತಿ ಕುಡಿದು ಚಿಂತಾಮಣಿ ನಗರದ ಗಜಾನನ ವೃತ್ತದಿಂದ ಕಾರು ಚಾಲನೆ ಮಾಡಿಕೊಂಡು ಬಾಗೇಪಲ್ಲಿ ರಸ್ತೆ ಕಡೆ ಹೋಗುವಾಗ ಮೊದಲು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ. ಬೈಕ್ ಗೆ ಡಿಕ್ಕಿ ಹೊಡೆದು, ತದನಂತರ ಆಟೋಗೆ ಡಿಕ್ಕಿ ಹೊಡೆದು ಜಖಂಗೊಳಿಸಿ, ನಂತರ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಲಕ್ಕಮ್ಮ ಎಂಬ ವೃದ್ದೆಗೆ ಡಿಕ್ಕಿ ಹೊಡೆದು ಗಾಯಗೊಳಿಸಿ, ನಂತರ ರಸ್ತೆ ಬದಿಯ ಆದರ್ಶ ಚಿತ್ರಮಂದಿರದ ಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ,ಸರಣಿ ಅಪಘಾತದಲ್ಲಿ ಬೈಕ್ ಹಾಗೂ ಆಟೋ ಜಖಂಗೊಡಿದ್ದು, ವೃದ್ದೆ ಲಕ್ಕಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಚಿಂತಾಮಣಿ ನಗರ ಠಾಣೆಯ ಪೊಲೀಸರು ಕಾರು ಚಾಲಕ ಚರಣ್ ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Breaking news ಕ್ರೈಂ ತಾಲ್ಲೂಕು ಸುದ್ದಿ ನಮ್ಮ ಚಿಕ್ಕಬಳ್ಳಾಪುರ ರಾಜ್ಯ ಸುದ್ದಿ