ಶಿಡ್ಲಘಟ್ಟದಲ್ಲಿ ಸಡಗರ ಸಂಭ್ರಮದಿಂದ ರಂಜಾನ್ ಆಚರಣೆ ಮಿಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ


ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿರುವ ಪವಿತ್ರ ಈದ್ ಉಲ್ ಫಿತರ್ಹ ಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಶಿಡ್ಲಘಟ್ಟ ನಗರದ ಮಿಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ನಂತರ ಹಿರಿಯರ ಸಮಾಧಿಗಳಿಗೆ ಗೌರವ ಸಲ್ಲಿಸಿದರು. ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ಬೈಪಾಸ್‌ನಲ್ಲಿರುವ ಮಿಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಎಲ್ಲ ಮುಸ್ಲಿಂ ಬಂಧುಗಳು ಜಮಾಯಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಹಿರಿಯರ ಸಮಾಧಿಗಳಿಗೆ ನಮಿಸಿ ಗೌರವ ಸಲ್ಲಿಸಿದರು. ಸಂಪ್ರದಾಯದಂತೆ ಶಿಡ್ಲಘಟ್ಟ ನಗರದಲ್ಲಿನ ಐತಿಹಾಸಿಕ ಜಾಮಿಯಾ ಮಸೀದಿ ಬಳಿ ವಿವಿಧ ಮಸೀದಿಗಳಿಂದ ಬಂದ ಮುಸ್ಲಿಂ ಬಾಂಧವರು ನಂತರ ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಶಾಸಕ ಮೇಲೂರು ರವಿಕುಮಾರ್, ಮಾಜಿ ಶಾಸಕ ವಿ.ಮುನಿಯಪ್ಪ, ರಾಜಣ್ಣ ಹಾಗೂ ಕಾಂಗ್ರೆಸ್ ಮುಖಂಡ ಆಂಜಿನಪ್ಪ ಇನ್ನಿತರರು ರಂಜಾನ್‌ನ ಶುಭ ಕೋರಿದರು. ಈ ವೇಳೆ ಮಾತನಾಡಿದ ಧರ್ಮಗುರು ಮುಫ್ತಿ ಫಹೀಂ ಉದ್ದೀನ್, ಇಸ್ಲಾಂ ಧರ್ಮವು ಶಾಂತಿಯ ಸಂದೇಶವನ್ನು ಸಾರುತ್ತದೆ ಪ್ರವಾದಿ ಮೊಹಮ್ಮದ್ಪೈ ಗಂಬರ್ ಅವರು ಪವಿತ್ರ ಗ್ರಂಥ ಖುರಾನಿನ ಮೂಲಕ ಇಸ್ಲಾಂ ಧರ್ಮವನ್ನು
ಬೆಳೆಸಿದರು ಜಾತಿ, ಮತ ಧರ್ಮಗಳನ್ನು ಬಿಟ್ಟು ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಬೇಕೆಂದು ಕಲಿಸಿದ್ರು ಎಂದರು.

ತಾಲ್ಲೂಕು ಸುದ್ದಿ ನಮ್ಮ ಚಿಕ್ಕಬಳ್ಳಾಪುರ ರಾಜ್ಯ ಸುದ್ದಿ