ಡಿ.ಕೆ.ಶಿವಕುಮಾರ್ ಒಕ್ಕಲಿಗ ನಾಯಕರಲ್ಲ-ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕೆ


ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಕ್ಕಲಿಗ ನಾಯಕರಲ್ಲ, ಯಾಕೆ ಎಂದರೆ, ಅವರು ಕುಕ್ಕರ್ ಬಾಂಬ್ ಹಾಕಿದ ಮುಸ್ಲೀಂ ನಾಯಕನನ್ನು ನನ್ನ ಬ್ರದರ್ ಎಂದವರು ವಕ್ಕಲಿಗ ನಾಯಕರಾಗಲು ಸಾಧ್ಯ ಎಂದು ಬಿಜೆಪಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಟೀಕಿಸಿದರು.ಕೋಲಾರ ಹೊರ ವಲಯದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಕಾಂತರಾಜ್ ವರದಿಯಲ್ಲಿ ವಕ್ಕಲಿಗರನ್ನು ತುಳಿಯಲಾಗಿದೆ, ಇದನ್ನು ಮಾಡಿಸಿದ್ದು ಸಿದ್ದರಾಮಯ್ಯ, ಈ ಮೂಲಕ ವಕ್ಕಲಿಗರಿಗೆ ಇಷ್ಟು ಅನ್ಯಾಯ ಮಾಡಿದವರು ವಕ್ಕಲಿಗರ ಮತ ಹೇಗೆ ಕೇಳುತ್ತೀರ ಎಂದು ಪ್ರಶ್ನಿಸಿದ ಅವರು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸವಾಲು ಹಾಕುವುದರಲ್ಲಿ ನಿಪುಣರು, ಅನುದಾನ ಕಡಿಮೆ ಆಗಿದ್ದರೆ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಪ್ರಶ್ನೆ ಮಾಡಬಹುದಿತ್ತು ಯಾಕೆ ಯಾರೂ ಕೇಳಿಲ್ಲ, ಕಾಂಗ್ರೆಸ್ ನವರು ಪ್ರಶ್ನೆ ಮಾಡಬೇಕಾದ ಸ್ಥಳದಲ್ಲಿ ಕೇಳದೆ ರಾಜ್ಯದಲ್ಲಿ ಭಜನೆ ಮಾಡುತ್ತಿದ್ರಾ ಎಂದು ವ್ಯಂಗ್ಯವಾಡಿದರು.ರಾಜ್ಯದ ಅಭಿವೃದ್ದಿ ಯೋಜನೆಗಳಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಕೊಟ್ಟಂತಹ ಯೋಜನೆಗಳಿಗಿಂತ ಹತ್ತುಪಟ್ಟು ಹೆಚ್ಚು ಯೋಜನೆಗಳು ಕೊಡಲಾಗಿದೆ,ರಾಜ್ಯದಲ್ಲಿ ಗ್ಯಾರಂಟಿ ಬಂದ ಮೇಲೆ ರಾಜ್ಯದಲ್ಲಿ ಒಂದು ಕಿ.ಮೀ ರಸ್ತೆ ಆಗಿಲ್ಲ, ಬರಗಾಲದಲ್ಲಿ ಜನತೆ ನೋವು ಅನುಭವಿಸುತ್ತಿದ್ದರೂ ಒಂದು ರೂ. ಅನುದಾನ ಕೊಟ್ಟಿಲ್ಲ, ದೇಶದ ಸಂವಿಧಾನವನ್ನು ಭಗವದ್ಗೀತೆಯಷ್ಟೇ ಪವಿತ್ರವಾದದ್ದು, ಎಂದು ನರೇಂದ್ರ ಮೋದಿ ಹೇಳಿದ್ದಾರೆ. ನೆಹರು ಕುಟುಂಬಗಳ ಸಮಾಧಿಗೆ ನೂರಾರು ಎಕರೆ ಜಮೀನು ಕೊಟ್ಟರು. ಆದರೆ ಅಂಬೇಡ್ಕರ್ ಸಮಾಧಿಗೆ ಜಾಗವನ್ನು ನೀಡದೆ ಅಪಮಾನ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಂಎಲ್ಸಿ ಇಂಚರಗೋವಿಂದರಾಜು, ಅಭ್ಯರ್ಥಿ ಮಲ್ಲೇಶ್ ಬಾಬು, ಬಿಜೆಪಿ ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ಕೆಂಬೊಡಿ ನಾರಾಯಣಸ್ವಾಮಿ, ಮಮತಾ ಗೌಡ ಇತರರು ಇದ್ದರು.

Breaking news ದೇಶ ರಾಜಕೀಯ ರಾಜ್ಯ ಸುದ್ದಿ