ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಸಹಕಾರ ಸಚಿವ ಕೆ.ಏನ್.ರಾಜಣ್ಣ ಮನವಿ


ಬಾಗೇಪಲ್ಲಿ:ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್‌ ಅವರ ದರ್ಪ,ದಬ್ಬಾಳಿಕೆಯ ಪ್ರತಿಫಲವಾಗಿ ವಿಧಾನಸಭಾ ಚುನಾವಣೆಯಲ್ಲಿ ಜನ ಅವರನ್ನು ತಿರಸ್ಕರಿಸಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಲಕ್ಷಾಂತರ ಜನರ ಕಣ್ಣಲ್ಲಿ ನೀರು ಹಾಕಿಸಿದ್ದರಿಂದ ಇಂದು ಅವರು ಅಳುವ ಪರಿಸ್ಥಿತಿ ಬಂದಿದೆ’ ಎಂದು ಸಹಕಾರ ಸಚಿವ ಕೆ. ಏನ್. ರಾಜಣ್ಣ ತಿಳಿಸಿದ್ದಾರೆ.ಪಟ್ಟಣದ ಹೊರವಲಯದ ಎಸ್. ಎಲ್. ಏನ್. ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್‌ ಮುಖಂಡರ, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ‘ದಬ್ಬಾಳಿಕೆಯನ್ನು ಶಾಶ್ವತವಾಗಿ ಅಂತ ಮಾಡಲು ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ರಕ್ಷ ರಾಮಯ್ಯ ರವರನ್ನು ಲೋಕಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದ ಅವರು ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳ ಸರ್ಕಾರ ಚುನಾವಣೆಗೂ ಮುನ್ನಾ ಎರಡು ಕೋಟಿ ಉದ್ಯೋಗಗಳು ನೀಡುತ್ತೇವೆ, ಕಪ್ಪು ಹಣ ತಂದು ತಲಾ ಒಂದು ಕುಟುಂಬದ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುತ್ತೇವೆ ಎಂದರು ಎಲ್ಲಿ 15 ಲಕ್ಷ ಅಲ್ಲ 15 ಪೈಸ ಕೂಡ ಯಾರಖಾತೆಗೂ ಬಂದಿಲ್ಲ ಬಿಜೆಪಿ ಅವರದ್ದೆಲ್ಲ ಚುನಾವಣೆ ಗಿಮಿಕ್ಸ್ ಆದ್ದರಿಂದ ತಾವು ಮತದಾನ ಮಾಡುವಾಗ ಯೋಚನೆ ಮಾಡಿ ಮತ ಹಾಕಿ ಎಂದರು.ಶಾಸಕ ಎಸ್.ಏನ್.ಸುಬ್ಬಾ ರೆಡ್ಡಿ ಮಾತನಾಡಿ ನಮ್ಮ ಕಾಂಗ್ರೇಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ ನಮ್ಮ ಕಾಂಗ್ರೇಸ್ ಪಕ್ಷ ಗ್ಯಾರೆಂಟಿ ಪಕ್ಷ ಯಾಕೆಂದರೆ ನಾವು ಕೊಟ್ಟ ಆಶ್ವಾಸನದಂತೆ ಎಲ್ಲಾ ಗ್ಯಾರೆಂಟಿ ಯೋಜನೆಗಳು ನಮ್ಮ ಸರ್ಕಾರ ಜಾರಿಗೆಗೆ ತಂದಿದೆ ನಮ್ಮ ಸರ್ಕಾರ ಬಡವರಿಗೆ ಹೊಟ್ಟೆಗೆ ಅನ್ನ ಹಾಕುವ ಸರ್ಕಾರ ಬಿಜೆಪಿ ಸರ್ಕಾರ ಬಡವರ ಹೊಟ್ಟೆಗೆ ಕಣ್ಣಾ ಹಾಕುವ ಸರ್ಕಾರ ದಯವಿಟ್ಟು ನಮ್ಮ ಕ್ಷೇತ್ರದಿಂದ ಅತೀ ಹೆಚ್ಚು ಮತಗಳು ನೀಡುವ ಮೂಲಕ ಕಾಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು.ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ. ಆರ್. ಸೀತರಾಮ್,ಜಿಲ್ಲಾಧ್ಯಕ್ಷ ಕೇಶವರೆಡ್ಡಿ,ಕಾಂಗ್ರೇಸ್ ಮುಖಂಡರಾದ ಎಚ್.ವಿ.ನಾಗರಾಜ್, ಕೆ ಎಂ ಎಫ್ ಮಂಜುನಾಥ ರೆಡ್ಡಿ,ಬುರಗಮಡಗು ನರಸಿಂಹಪ್ಪ, ಗುಂಟಿಗಾನಪಲ್ಲಿ ಮಂಜುನಾಥ ರೆಡ್ಡಿ, ಅಮರನಾಥ ರೆಡ್ಡಿ,ಲಾಯರ್ ಚಂದ್ರಶೇಖರ ರೆಡ್ಡಿ, ಎ. ವಿ. ಪೂಜಪ್ಪ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ. ನಂಜುಂಡಪ್ಪ, ಸದಸ್ಯೆ ಗುಳ್ನಜ್ ಬೇಗಂ,ಎಸ್. ಎಸ್. ರಮೇಶ್ ಬಾಬು,ಯರ್ರಕಿಟ್ಟಪ್ಪ ಸೇರಿದಂತೆ ವಿವಿಧ ಮುಖಂಡರು,ಕಾರ್ಯ ಕರ್ತರು ಇದ್ದರು.

ನಮ್ಮ ಚಿಕ್ಕಬಳ್ಳಾಪುರ ರಾಜಕೀಯ ರಾಜ್ಯ ಸುದ್ದಿ