ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ,ಸುಮಾರು ೧೫ ಅಡಿ ಆಳಕ್ಕೆ ಬಿದ್ದ ಕಾರು,ದ್ವಿಚಕ್ರ ವಾಹನ

ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ,
ಸುಮಾರು ೧೫ ಅಡಿ ಆಳಕ್ಕೆ ಬಿದ್ದ ಕಾರು,ದ್ವಿಚಕ್ರ ವಾಹನ
ಸ್ಥಳದಲ್ಲೇ ಭಾವ ಹಾಗು ಭಾಮೈದುನನ ಸಾವು

ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಾದ ಬಾವ, ಬಾಮೈದ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಕಮತಂಪಲ್ಲಿ ಕ್ರಾಸ್ ನಲ್ಲಿ ಸಂಭವಿಸಿದೆ.
ಕಡಪ- ಬೆಂಗಳೂರು ಬೈಪಾಸ್ ತಾಡಿಗೋಲ್ ಕ್ರಾಸ್ ಸಮೀಪ ಕಮತಂಪಲ್ಲಿ ಕ್ರಾಸ್ ನಲ್ಲಿ ಅಪಘಾತ ಸಂಭವಿಸಿದ್ದು, ಮೃತರು ಶ್ರೀನಿವಾಸಪುರ ತಾ ಬೈರಗಾನಪಲ್ಲಿ ಗ್ರಾಮದ ಗೋಪಾಲಪ್ಪ(೫೮) ಹಾಗು ಕೋನಪಲ್ಲಿ ಗ್ರಾಮದ ವೆಂಕಟೇಶ್ (೪೫) ಎಂದು ಗುರುತಿಸಲಾಗಿದೆ. ಅಪಘಾತದ ರಭಸಕ್ಕೆ ರಸ್ತೆಯಿಂದ ಸುಮಾರು ೧೫ ಅಡಿಗಳ ಆಳಕ್ಕೆ ಕಾರು ಹಾಗೂ ದ್ವಿಚಕ್ರವಾಹನ ಸಮೇತ ಸವಾರರು ಬಿದ್ದಿದ್ದಾರೆ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Breaking news