ಯಲಹಂಕ ಶಾಸಕ ವಿಶ್ವನಾಥ್ ಮನೆ ಭೇಟಿಗೆ ಆಗಮಿಸಿ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ ಹೇಳಿಕೆ


ಕ್ಷೇತ್ರದ 7ಕಡೆ ಪ್ರಚಾರ ಆರಂಭವಾಗಿದೆ,

ಆದ್ರೆ ಯಲಹಂಕದಲ್ಲಿ ಆರಂಭ ಮಾಡಲು ಆಗಿಲ್ಲ

ಎಲ್ಲರಿಗೂ ಗೊತ್ತಿರುವಂತೆ ವಿಶ್ವನಾಥ್ ಅವರಿಗೆ ಮೊದಲಿನಿಂದಲು ನನ್ನ ಬಗ್ಗೆ ಬೇಸರವಿದೆ

ಹಲವು ಭಾರಿ ವಿಶ್ವನಾಥ್ ಅವರಿಗೆ ಕರೆ ಮಾಡಿ ಮೆಸೇಜ್ ಸಹ ಮಾಡಿದ್ದೆ

ಆದ್ರೆ ಅವರು ಯಾವುದಕ್ಕೂ ಉತ್ತರ ಕೊಡಲಿಲ್ಲ

ಹೀಗಾಗಿ ನಾನೆ ಖುದ್ದು ಇಂದು ಅವರ ಮನೆಗೆ ಭೇಟಿ ಮಾಡಲು ಬಂದಿದ್ದೇ‌ನೆ

ಆದ್ರೆ ಅವರು ಮನೆಯಲಿಲ್ಲ ಅಂತ ಸಿಬ್ಬಂದಿ ಹೇಳ್ತಿದ್ದಾರೆ

ಇನ್ನೂ ಎರಡು ಮೂರು ಭಾರಿ ಅವರನ್ನ ಕನ್ವಿನ್ಸ್ ಮಾಡುವ ಪ್ರಯತ್ನ ಮಾಡ್ತೀನಿ

ಇದೊಂದೆ ಚುನಾವಣೆ ಕೊನೆಯಲ್ಲ,,

ಮುಂದೆಯು ನಾವು ಜೊತೆಯಾಗಿ ಸಾಗಬೇಕಾಗುತ್ತೆ

ವಿಶ್ವನಾಥ್ ಜೊತೆ ಮಾತನಾಡುವುದಾಗಿ ಯಡಿಯೂರಪ್ಪ ಅವರು ಭರವಸೆ ಕೊಟ್ಟಿದ್ದಾರೆ

ಅಮಿತ್ ಶಾ ಅವರು ಬಂದಾಗ ಅವರ ಹಂತದಲ್ಲಿ ಅಸಮಾಧಾನ ಬಗೆಹರಿಯೊ ಭರವಸೆ ಇದೆ

ರಾಜಕಾರಣದಲ್ಲಿ ಎಲ್ಲವೂ ಸರಾಗವಾಗಿ ಆದ್ರೆ ಅದು ರಾಜಕಾರಣ ಅನ್ನಿಸಿಕೊಳ್ಳಲ್ಲ

ಅಲ್ಲಿ ಮುಳ್ಳಿನ ಹಾದಿ ಇರುತ್ತೆ,

ಕೆಂಪು ಗುಲಾಬಿ ಹಾದಿ ಇರಲ್ಲ

ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡ್ತೀವಿ

ಅವರಿಗೂ ನಮಗೂ ಯಾವುದೇ ವೈಯಕ್ತಿಕ ಬಿನ್ನಾಬಿಪ್ರಾಯಗಳಿಲ್ಲ

ವಿಶ್ವನಾಥ್ ರವರ ಮಗನಿಗೆ ಸೀಟ್ ಸಿಗಲಿಲ್ಲ ಎಂಬ ಬೇಸರ ಅವರಿಗಿದೆ

ಮುಂದೆ ಎಲ್ಲವೂ ಸರಿಯಾಗುತ್ತೆ

ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿಕೆ..

ತಾಲ್ಲೂಕು ಸುದ್ದಿ ನಮ್ಮ ಚಿಕ್ಕಬಳ್ಳಾಪುರ ರಾಜಕೀಯ ರಾಜ್ಯ ಸುದ್ದಿ