ಬಾಗೇಪಲ್ಲಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಪ್ರಚಾರ ಶುರು ಮಾಡಿದ ರಕ್ಷಾ ರಾಮಯ್ಯ.

ಬಾಗೇಪಲ್ಲಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಪ್ರಚಾರ ಶುರು ಮಾಡಿದ ರಕ್ಷಾ ರಾಮಯ್ಯ..
ದೇವರ ಮೂಲೆಯಿಂದ ಆರಂಭವಾದ ಕ್ಯಾಂಪೇನ್ ಗೆ ಭರ್ಜರಿ ರೆಸ್ಪಾನ್ಸ್.
ರಕ್ಷಾ ರಾಮಯ್ಯಗೆ 4 ಜನ ಸಾಸಕರು ಮಾಜಿ ಸಚಿವರು ಸಾಥ್.
ತೀವ್ರ ಕುತೂಹಲ ಮೂಡಿಸಿದ್ದ ಹಾಗೂ ಕಗ್ಗಂಟಾಗಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕೊನೆಗೂ ಸುಖಾಂತ್ಯಗೊಂಡು ಹೈಕಮಾಂಡ್ ರಕ್ಷಾರಾಮಯ್ಯಗೆ ಟಿಕೆಟ್ ನೀಡಿದೆ.. ಟಿಕೆಟ್ ಪಡೆದ ರಕ್ಷಾರಾಮಯ್ಯ ಕ್ಷೇತ್ರದ ದೇವಮೂಲೆಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಗಡಿದಂ ಕ್ಷೇತ್ರದ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದ್ರು. ಈ ವೇಳೆ ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್, ಪುಟ್ಟಸ್ವಾಮಿಗೌಡ, ಶರತ್ ಬಚ್ಚೇಗೌಡ, ರಕ್ಷಾರಾಮಯ್ಯ ಗೆ ಸಾಥ್ ನೀಡಿದ್ರು, ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಹೊರಬಾಗದ ಆಶ್ವಥಕಟ್ಟೆ ಮೇಲೆ ನಿಂತು ಸಾರ್ವಜನಿಕರೊಂದಿಗೆ ಮಾತನಾಡಿದ ರಕ್ಷಾರಾಮಯ್ಯ ಪುಣ್ಯ ಕ್ಷೇತ್ರ ಗಡಿದಂ ಕ್ಷೇತ್ರದಿಂದ ಪ್ರಚಾರ ಆರಂಬಿಸಿದ್ದೇನೆ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಶಾಸಕರು ಮಾಜಿ ಶಾಸಕರ ಅಭೂತಪೂರ್ವ ಬೆಂಬಲದ ಜೊತೆಗೆ ಜನಾಶೀರ್ವಾದ ತಮಗೆ ಇದೆ ಎಂದರು ಅಷ್ಟೇ ಅಲ್ಲದೆ ಕೇಂದ್ರ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ರು.

ತಾಲ್ಲೂಕು ಸುದ್ದಿ ನಮ್ಮ ಚಿಕ್ಕಬಳ್ಳಾಪುರ ರಾಜಕೀಯ