ಶಿವಶಂಕರ್ ರೆಡ್ಡಿಗೆ ಟಿಕೆಟ್ ನೀಡಿ:ನಗರಸಭೆ ಸದಸ್ಯ ಗೋಪಿನಾಥ್

ಗೌರಿಬಿದನೂರು: ನಗರದ ಶ್ರೀಶನೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ನಗರಸಭೆ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಸದಸ್ಯ ಗೋಪಿನಾಥ್ ಏಪ್ರಿಲ್ ತಿಂಗಳಲ್ಲಿ ನಡೆಯುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎನ್.ಎಚ್.ಶಿವಶಂಕರ್ ರೆಡ್ಡಿ ರವರನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು. ಎನ್.ಎಚ್.ಶಿವಶಂಕರ್ ರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಕಟ್ಟಾಳು ಆಗಿ ದುಡಿಯುವುದಲ್ಲದೆ ರಾಜ್ಯದ ವಿಧಾನ ಸಭೆ ಉಪಾಧ್ಯಕ್ಷರಾಗಿ, ಕೃಷಿ ಸಚಿವರಾಗಿ, ಐದು ಬಾರಿ ಶಾಸಕರಾಗಿ, ಕೆಪಿಸಿಸಿ ಸದಸ್ಯರಾಗಿ, ಎಐಸಿಸಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದು ಪಕ್ಷಕ್ಕಾಗಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಬೆಳೆಯುವಲ್ಲಿ ಶ್ರಮವಹಿಸಿದ್ದಾರೆ ಇಂತಹವರನ್ನು ಪಕ್ಷವು ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕು ಮಾಡಲಿಲ್ಲವೆಂದರೆ ಕಾಂಗ್ರೆಸ್ ಪಕ್ಷದ ಚಿಹ್ನೆಯಡಿಯಲ್ಲಿ ಗೆದ್ದಂತಹ ಎಲ್ಲಾ ನಗರಸಭೆ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ರಾಜೀನಾಮೆ ನೀಡುತ್ತವೆ ಎಂದು ಹೇಳಿದರು.ಇದೇ ವೇಳೆ ನಗರಸಭೆ ಸದಸ್ಯರಾದ ವಿ.ರಮೇಶ್, ಶ್ರೀರಾಮಯ್ಯ, ಮಂಜುಳಾರಾಮಾಂಜಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೋಟೆ ಅಶ್ವಥ್ ನಾರಾಯಣ್ ಹಾಗೂ ಮುಖಂಡರಾದ ಬಾಬುರೆಡ್ಡಿ, ಮನೋಹರ್, ನಾಗಸ್ವಾಮಿ, ಹರ್ಷವರ್ಧನರೆಡ್ಡಿ, ಶ್ರೀನಿವಾಸ್, ವಿಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

ನಮ್ಮ ಚಿಕ್ಕಬಳ್ಳಾಪುರ