ರಾಮ್ ಚರಣ್ ಹುಟ್ಟುಹಬ್ಬದ ಪ್ರಯುಕ್ತ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ

ಚಿಂತಾಮಣಿ:ಚಿಂತಾಮಣಿ ಮೆಗಾ ಫ್ಯಾಮಿಲಿ ಫ್ಯಾನ್ಸ್ ಕ್ಲಬ್ ಮತ್ತು ಲಯನ್ಸ್ ಕ್ಲಬ್ ಆಫ್ ಚಿಂತಾಮಣಿ ಇವರ ಸಹಯೋಗದೊಂದಿಗೆ ತೆಲುಗು ಚಲನಚಿತ್ರ ನಟ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜ್ ರವರ 39ನೇ ರವರ ಹುಟ್ಟುಹಬ್ಬದ ಪ್ರಯುಕ್ತ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ನಗರದ ವಿದ್ಯಾ ಗಣಪತಿ ಮಂದಿರದ ಆವರಣದಲ್ಲಿ ಆಯೋಜಿಸಲಾಗಿತ್ತು.ರಾಮ್ ಚರಣ್ ಅಭಿಮಾನಿಗಳು ಶಿಭಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.ಶಿಬಿರದಲ್ಲಿ 250 ಯೂನಿಟ್ ರಕ್ತ ಸಂಗ್ರಹವಾಯಿತು.


ಈ ವೇಳೆ ಮಾತನಾಡಿದ ಅಭಿಮಾನಿಗಳು ಮೆಗಾ ಕುಟುಂಬದ ಹೆಸರಿನಲ್ಲಿ ಪ್ರತಿವರ್ಷ ಉತ್ತಮವಾದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ. ಆ ಕುಟುಂಬದ ಒಬ್ಬೊಬ್ಬರ ಹುಟ್ಟು ಹಬ್ಬ ಬಂದಾಗ ಕರ್ನಾಟಕಾದ್ಯಂತ ಒಂದೊಂದು ತಾಲ್ಲೂಕಿನಲ್ಲಿ ರಕ್ತದಾನ ಶಿಬಿರಗಳು, ಬಡವರಿಗೆ ಸಹಾಯ ಮಾಡುವ ಕಾರ್ಯಗಳನ್ನು ಮಾಡುತ್ತಿದ್ದೇವೆ
ಈ ಸಂದರ್ಭದಲ್ಲಿ ರಾಮ್ ಚರಣ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾಲ್ಲೂಕು ಸುದ್ದಿ ನಮ್ಮ ಚಿಕ್ಕಬಳ್ಳಾಪುರ