ಅತ್ತೆಯ ಮೇಲೆ ಸೊಸೆಯಿಂದ ಹಲ್ಲೆ

ತುತ್ತು ಹಾಕಿ ಮುತ್ತು ಕೊಟ್ಟು ಮಗನನ್ನು ಹೆತ್ತು ಸೊಸೆ ತಂದ ತಪ್ಪಿಗೆ ಇವತ್ತು ಅತ್ತೆಯಾದವಳು ರಸ್ತೆಗೆ ಬಿದ್ದಿದ್ದಾಳೆ. ಸ್ವಂತ ಅತ್ತೆಯನ್ನ ಕಂಡರೆ ಸೊಸೆಗೆ ಆಗೊಲ್ಲ ಅನ್ನೋ ಘಟನೆ ಲೋಕರೂಡಿ ಮಾತಿಗೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಈ ಘಟನೆಯನ್ನ ನೀವೇ ನೋಡಿ. ಹೌದು, ಇಂತಹದೊಂದು ಮನಕಲುಕುವ ಘಟನೆ ನಡೆದುಹೋಗಿದೆ. ಸ್ವಂತ ಅತ್ತೆಯನ್ನು ಬೀದಿಯಲ್ಲಿ ನಾಯಿಯಂತೆ ಎಳೆದಾಡಿರುವ ಘಟನೆ ಇದು. ಈ ಘಟನೆ ನಡೆದಿರೋದು ಶಿಡ್ಲಘಟ್ಟ ತಾಲೂಕಿನ ಕೊಂಡಪ್ಪಗಾರಪಲ್ಲಿಯಲ್ಲಿ. ಅತ್ತೆ ವೆಂಕಟಲಕ್ಷಮ್ಮ ಮೇಲೆ ಸೊಸೆ ಲಕ್ಷೀದೇವಮ್ಮ ಹಲ್ಲೆ ನಡೆಸಿದ್ದು ಮಾನವೀಯತೆ ಇಲ್ಲದಂತೆ ನಡೆದುಕೊಂಡಿದ್ದಾಳೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅತ್ತೆ ಸೊಸೆ ನಡುವೆ ಗಲಾಟೆ ನಡೆದಿದೆ. ಈ ಸಮಯದಲ್ಲಿ ಮುನಿಸಿಕೊಂಡು ಹೊರಗಡೆ ಮಲಗಿದ ಹಣ್ಣು, ಹಣ್ಣು ಮುದುಕಿಯನ್ನು ರಸ್ತೆಯಲ್ಲಿ ದರದರನೆ ಎಳೆದು, ಎತ್ತಿ ಬಿಸಾಕಿ, ಕೊಡಬಾರದ ಹಿಂಸೆ ಕೊಟ್ಟಿದ್ದಾರೆ. ಗಾಯಾಳು ಅತ್ತೆ ಈಗ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.ಈ ಸಂಭಂದ ಶಿಡ್ಲಘಟ್ಟ ತಾಲ್ಕೂಕು ದಿಬ್ಬೂರಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಮ್ಮ ಚಿಕ್ಕಬಳ್ಳಾಪುರ