ಮಾಜಿ ಉಪಸಭಾಪತಿ ಹಾಗೂ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಯವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು.

ವಿಧಾನಸಭೆಯ ಮಾಜಿ ಉಪ ಸಭಾಪತಿ ಹಾಗೂ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ M.ಕೃಷ್ಣಾ ರೆಡ್ಡಿ ಯವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನ್ಯಾಯಾಲಯದ ಆದೇಶ.

ಎನ್.ಆರ್.ರಮೇಶ್ ಅವರು ದಾಖಲಿಸಿದ್ದ PCR 17136/2022 ಗೆ ಸಂಬಂಧಿಸಿದಂತೆ Code of Criminal Procedure ನ ಕಲಂ 200 ರ ಅನ್ವಯ IPC Section 499 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ Additional Chief Metropolitan Magistrate ಜೆ. ಪ್ರೀತ್ ಅವರು ಪೋಲೀಸರಿಗೆ ಆದೇಶಿಸಿದ್ದಾರೆ.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗಣೇಶ‌ಮಂದಿರ ವಾರ್ಡ್ ವ್ಯಾಪ್ತಿಯ ಬನಗಿರಿ ನಗರಕ್ಕೆ ಸೇರಿರುವ ಕತ್ರಿಗುಪ್ಪೆ ಸರ್ವೇ ನಂ. 125 ಮತ್ತು 126 ಕ್ಕೆ ಸೇರಿರುವ ಸುಮಾರು 350 ಕೋಟಿ ಮೌಲ್ಯದ 4.31 ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತಿಗೆ 41 ಮಂದಿ ಸರ್ಕಾರಿ ನೆಲಗಳ್ಳರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸುವ ಯತ್ನ ನಡೆಸಿದ್ದರು. ಈ ಸಂಬಂಧ ಲೋಕಾಯುಕ್ತ ಮತ್ತು ಬಿಎಂಟಿಎಫ್ ನಲ್ಲಿ ದೂರುಗಳನ್ನು ಸಲ್ಲಿಸಲಾಗಿತ್ತು ಹಾಗೂ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೋಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಸದನ ಸಮಿತಿಯ ಅಧ್ಯಕ್ಷರೂ ಆಗಿದ್ದ ಕೃಷ್ಣಾ ರೆಡ್ಡಿ ಅವರು ಆರೋಪಿಗಳ ವಿರುದ್ಧ ಕ್ರಮಕ್ಕೆ ಆದೇಶಿಸುವ ಬದಲಾಗಿ, ಪಾಲಿಕೆಯ ಸ್ವತ್ತನ್ನು ಪಾಲಿಕೆಯ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದ ಅಧಿಕಾರಿಯ ವಿರುದ್ಧವೇ ನಿರ್ಣಯ ತೆಗೆದುಕೊಂಡಿದ್ದರು.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಲೋಕಾಯುಕ್ತ ಮತ್ತು ಬಿಎಂಟಿಎಫ್ ತನಿಖಾ ಸಂಸ್ಥೆಗಳಲ್ಲಿ ಎನ್.ಆರ್.ರಮೇಶ್ ಅವರು ದೂರುಗಳನ್ನು ದಾಖಲಿಸಿದ್ದರು. ಈ ಸಂಬಂಧ ಎನ್.ಆರ್.ರಮೇಶ್ ಅವರ ಬಗ್ಗೆ ಕೃಷ್ಣಾ ರೆಡ್ಡಿಯವರು ಅವಹೇಳನಕಾರಿಯಾಗಿ ಮಾತನಾಡಿದ್ದರು.
ಈ ಸಂಬಂಧ ಎನ್.ಆರ್.ರಮೇಶ್ ಅವರು ಕೃಷ್ಣಾ ರೆಡ್ಡಿಯವರ ವಿರುದ್ಧ ಖಾಸಗಿ ದೂರನ್ನು ದಾಖಲಿಸಿದ್ದರು.
ನ್ಯಾಯಾಲಯದ ಆದೇಶದಂತೆ, ಕೃಷ್ಣಾ ರೆಡ್ಡಿಯವರು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಿ ಜಾಮೀನು ಪಡೆದುಕೊಳ್ಳಬೇಕಿದೆ.

ನಮ್ಮ ಚಿಕ್ಕಬಳ್ಳಾಪುರ ರಾಜ್ಯ ಸುದ್ದಿ