ಬಹುತೇಕ ರಕ್ಷಾ ರಾಮಯ್ಯರಿಗೆ ಕಾಂಗ್ರೆಸ್ ಟಿಕೆಟ್ ಕನ್ಫರ್ಮ್

 

ರಕ್ಷಾರಾಮಯ್ಯರಿಂದ ಏಪ್ರಿಲ್ ೧ ರಂದು ನಾಮಪತ್ರ ಸಲ್ಲಿಕೆ

ಬಹುತೇಕ ರಕ್ಷಾ ರಾಮಯ್ಯರಿಗೆ ಕಾಂಗ್ರೆಸ್ ಟಿಕೆಟ್ ಕನ್ಫರ್ಮ್

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ರಕ್ಷಾ ರಾಮಯ್ಯರವರಿಗೆ ಟಿಕೆಟ್ ಖಾತ್ರಿಯಾಗಿದೆ ಎನ್ನಲಾಗಿದ್ದು, ಏಪ್ರಿಲ್ ೧ರಂದು ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ತಯಾರಿ ನಡೆಸಿಕೊಂಡಿದ್ದಾರೆ ಎಂದು ವಿಶ್ವಾಸನೀಯ ಮೂಲಗಳಿಂದ ಲಭ್ಯವಾಗಿದೆ.

ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಕ್ಷಾ ರಾಮಯ್ಯ ಹೈಕಮಾಂಡ್‌ನಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದು, ಕಳೆದ ೧ವರ್ಷದಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸುತ್ತಾಡುತ್ತಿದ್ದಾರೆ. ಅಲ್ಲದೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿರುವ ರಕ್ಷಾ ರಾಮಯ್ಯರಿಗೆ ಮಾಜಿ ಮುಖ್ಯಮಂತ್ರಿ ಡಾ.ವೀರಪ್ಪಮೊಯಿಲಿ ಪ್ರಭಲ ಪೈಪೋಟಿ ನೀಡಿದ್ದು, ನನಗೆ ಟಿಕೆಟ್ ನೀಡಬೇಕು. ಇದು ನನ್ನ ಕೊನೆಯ ಚುನಾವಣೆ ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಹೈಕಮಾಂಡ್ ಎಲ್ಲಾ ರೀತಿಯಲ್ಲೂ ಅಳೆದು ತೂಗಿ ಟಿಕೆಟ್ ಹಂಚಿಕೆ ಮಾಡಲು ನಿರ್ಧರಿಸಿದ್ದು, ರಕ್ಷಾ ರಾಮಯ್ಯ ಪ್ರಭಲ ಬಲಜಿಗ ಕೋಮಿಗೆ ಸೇರಿದ್ದು ಯುವಕರಾಗಿದ್ದು, ಯುವಕರನ್ನು ಸೆಳೆಯುತ್ತಾರೆ. ಎಲ್ಲಾ ರೀತಿಯಲ್ಲೂ ಚುನಾವಣೆಯನ್ನು ಎದುರಿಸಲು ಸಮರ್ಥರಾಗಿದ್ದು, ಇವರೇ ಸೂಕ್ತ ಎಂಬ ಅಭಿಪ್ರಾಯವನ್ನು ರಾಜ್ಯ ಹೈಕಮಾಂಡ್ ವ್ಯಕ್ತಪಡಿಸಿದ್ದಾರೆ.

ಶಿವಶಂಕರರೆಡ್ಡಿ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದೊಂದು ವಾರದಿಂದಲೂ ರಕ್ಷಾ ರಾಮಯ್ಯ ದೆಹಲಿಯಲ್ಲಿ ಬೀಡು ಬಿಟ್ಟು ಹೈಕಮಾಂಡ್ ವರಿಷ್ಟ ತಮಗೆ ಆಪ್ತರೂ ಆಗಿರುವ ರಾಹುಲ್ ಗಾಂಧಿಗೆ ಟಿಕೆಟ್ ಕೊಡುವಂತೆ ಮನವರಿಕೆ ಮಾಡಿದ್ದು, ಬಹುತೇಕ ಟಿಕೆಟ್ ರಕ್ಷಾ ರಾಮಯ್ಯರಿಗೆ ಇಂದು ಅಂತಿಮಗೊಳ್ಳಲಿದ್ದು, ಏಪ್ರಿಲ್ ೧ ರಂದು ಸೋಮವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ತಯಾರಿ ನಡೆಸಲಾಗಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ದೇಶ ನಮ್ಮ ಚಿಕ್ಕಬಳ್ಳಾಪುರ ರಾಜಕೀಯ ರಾಜ್ಯ ಸುದ್ದಿ